
ಮೈಸೂರು: ಮೈಸೂರಿನಲ್ಲಿ ಆನೆ ದಂತ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ.
ಪ್ರೆಸ್ಟಿನ್ ಸಿಲ್ವ, ಜಯಪ್ರಕಾಶ್, ಮೋಹನ್, ರಮೇಶ್ ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ. ಪ್ರೆಸ್ಟಿನ್ ಹಾಗೂ ಜಯಪ್ರಕಾಶ್ ಇಬ್ಬರೂ ಕೇರಳ ಮೂಲಕ ತ್ರಿವೆಂಡ್ರಮ್ ಮೂಲದವರಾಗಿದ್ದು, ಮತ್ತಿಬ್ಬರು ಆರೋಪಿಗಳಾದ ಮೋಹನ್ ಹಾಗೂ ರಮೇಶ್ ಇಬ್ಬರೂ ಉದಯಗಿರಿ ನಿವಾಸಿಗಳಾಗಿದ್ದಾರೆಂದು ವರದಿಗಳು ತಿಳಿಸಿವೆ.
ಪ್ರೆಸ್ಟಿನ್ ಸಿಲ್ವ ಪ್ರಮುಖ ಆರೋಪಿಯೆಂದು ಹೇಳಲಾಗುತ್ತಿದೆ. ಈತನ ವಿರುದ್ಧ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ, ಕೇರಳದಲ್ಲಿಯೂ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ.
ಆರೋಪಿಗಳು ಪ್ರತೀ ಕೆಜಿ ಆನೆ ದಂತವನ್ನು ರೂ.20,000ಕ್ಕೆ ಮಾರಾಟ ಮಾಡುತ್ತಿದ್ದರು ಹಾಗೂ ಬಂಧಿತರಾಗಿರುವ ರಮೇಶ್ ಹಾಗೂ ಮೋಹನ್, ಜಯಪ್ರಕಾಶ್ ವಿಗ್ರಹ ಕೆತ್ತುವ ಕಲಾವಿದರಾಗಿದ್ದಾರೆಂದು ತಿಳಿದುಬಂದಿದೆ.
Advertisement