ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಕರ್ಷಕ ಚಿಟ್ಟೆಗಳ ಸುಂದರ ಚಿತ್ತಾರ: ನವೆಂಬರ್ 7 ರಿಂದ ಬಟರ್ ಪ್ಲೈ ಫೆಸ್ಟಿವಲ್

ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ ಇರುತ್ತವೆ.

ಬೆಂಗಳೂರು: ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ ಇರುತ್ತವೆ.

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ರಾಜ್ಯದ ಬಟರ್ ಪ್ಲೈ ಪೆಸ್ಟಿವಲ್ ಆಗಮಿಸುತ್ತಿದೆ.  ಆದರೆ ಈ ಬಾರಿ ಕೆಲವು ಬದಲಾವಣೆಗಳೊಂದಿಗೆ ಚಿಟ್ಟೆ ಹಬ್ಬ ಬರುತ್ತಿದೆ.

ಬೆಂಗಳೂರಿನಲ್ಲಿ ಹೊಸ ಚಿಟ್ಟೆ ಪ್ರಭೇದಗಳನ್ನು ಕಂಡುಹಿಡಿಯಲು ಒತ್ತು ನೀಡಲಾಗುವುದು. ದೊರೆಸ್ವಾಮಿ ಪಾಳ್ಯದ ಪಾರ್ಕ್ ನಲ್ಲಿ ನವೆಂಬರ್ 7 ರಿಂದ ಕರ್ನಾಟಕ ಅರಣ್ಯ ಇಲಾಖೆ ಚಿಟ್ಟೆ ಹಬ್ಬ ಆಯೋಜಿಸಿದೆ. ನವೆಂಬರ್ 7 ರಂದು ಉದ್ಘಾಟನೆಯಾಗಲಿರುವ ಚಿಟ್ಟೆ ಹಬ್ಬ ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ. 

ವರ್ಚ್ಯೂವಲ್ ಕಾರ್ಯಕ್ರಮಗಳ ಸರಣಿ ನಡೆಯಲಿದೆ, ಬಟರ್ ಫ್ಲೈ ಛಾಯಾಚಿತ್ರ ಪ್ರದರ್ಶನ, ಫೋಟೋ ಸ್ಪರ್ಧೆ, ಕ್ವಿಜ್, ಮತ್ತು ಕ್ರಾಸ್ ವರ್ಡ್ ನಡೆಯಲಿದ್ದು ಈಗಾಗಲೇ 70 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಇದನ್ನು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್), ಬೆಂಗಳೂರು ಬಟರ್‌ಫ್ಲೈ ಕ್ಲಬ್ (ಬಿಬಿಸಿ), ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಮತ್ತು ಇಂಡಿಯನ್ ಫೌಂಡೇಶನ್ ಫಾರ್ ಬಟರ್‌ಫ್ಲೈ ಆಯೋಜಿಸುತ್ತಿವೆ.

ಲಿಟಲ್ ಟೈಗರ್ ಪಿಯರೋಟ್, ಅಲಿಡಾ ಆಂಗಲ್, ರೆಡ್ ಅಡ್ಮಿರಲ್ ಮತ್ತು ಆರೆಂಜ್ ಅವ್ಲೆಟ್ ನಂತಹ ಹೊಸ ಆವಿಷ್ಕಾರಗಳನ್ನು ಹಂಚಿಕೊಳ್ಳಲು ಈವೆಂಟ್ ಉತ್ತಮ ವೇದಿಕೆಯಾಗಲಿದೆ ಎಂದು ಚಿಟ್ಟೆ ತಜ್ಞರು ಉತ್ಸುಕರಾಗಿದ್ದಾರೆ.

ಈ ಚಿಟ್ಟೆಗಳು ನಗರದಲ್ಲಿ ಹಿಂದೆಂದೂ ಕಂಡುಬಂದಿಲ್ಲ ಆದರೆ ಲಾಕ್ ಡೌನ್  ನಂತರ ಕಾಣಿಸಿಕೊಂಡಿರುವುದು ಮಾಲಿನ್ಯದ ಕುಸಿತದಿಂದ ಮಾತ್ರ ಪರಿಸರವನ್ನು ಸುಧಾರಿಸಲು ಸಾಧ್ಯ ಎಂಬ ಸ್ಪಷ್ಟ ಸಂದೇಶ ರವಾನಿಸಿವೆ.

ಈ ಜಾತಿಗಳು ಜಾಲಹಳ್ಳಿ, ಮಾಕಳಿ ದುರ್ಗಾ ಮತ್ತು ಜಿಕೆವಿಕೆಗಳಲ್ಲಿನ ರಸ್ತೆಬದಿಗಳಿಂದ ಸಂತಾನೋತ್ಪತ್ತಿ ಮಾಡಿವೆ ಎಂದು ಬಿಬಿಸಿಯ ಸಂಸ್ಥಾಪಕ ಅಶೋಕ್ ಸೇನ್ ಗುಪ್ತಾ ಹೇಳಿದ್ದಾರೆ.
 

Related Stories

No stories found.

Advertisement

X
Kannada Prabha
www.kannadaprabha.com