ಸಂಗ್ರಹ ಚಿತ್ರ
ರಾಜ್ಯ
ಕೊರೋನಾ ಸೋಂಕು ಪೀಡಿತ ನೌಕರರಿಗೆ ರಜೆ ನೀಡುವಲ್ಲಿ ಉದಾರವಾಗಿರಿ: ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಆದೇಶ
ಕೊರೋನಾ ವೈರಸ್ ಸೋಂಕು ಪೀಡಿತ ನೌಕರರಿಗೆ ರಜೆ ನೀಡುವಲ್ಲಿ ಉದಾರವಾಗಿರಿ ಎಂದು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು: ಕೊರೋನಾ ವೈರಸ್ ಸೋಂಕು ಪೀಡಿತ ನೌಕರರಿಗೆ ರಜೆ ನೀಡುವಲ್ಲಿ ಉದಾರವಾಗಿರಿ ಎಂದು ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಕೋವಿಡ್-19ನಿಂದ ಬಾಧಿತರಾದ ನೌಕರರು ಅಥವಾ ಕಾರ್ಮಿಕರು ಕ್ವಾರಂಟೈನ್ ನಲ್ಲಿರುವ ಅವಧಿಯನ್ನು ಗೈರು ಹಾಜರಿ ಎನ್ನದೆ ರಜೆಯೆಂದು ಪರಿಗಣಿಸಿ. ಕೊರೋನಾ ವೈರಸ್ ನಿಂದ ಬಾಧಿತರಾಗುವ ವ್ಯಕ್ತಿಗಳು ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಯಾವುದೇ ಸಂಸ್ಥೆಯ ಕಾರ್ಮಿಕರು ಅವರ ಹಕ್ಕಿನಲ್ಲಿರುವ ರಜೆಗಳನ್ನು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು.
ಇಎಸ್ಐ ವ್ಯಾಪ್ತಿಗೆ ಒಳಪಡದ ಕೊರೋನಾ ರೋಗದಿಂದ ಬಾಧಿತರಾದ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ರಜೆ ಮಂಜೂರು ಮಾಡಬೇಕು. ಖಾತೆಯಲ್ಲಿ ರಜೆ ಇಲ್ಲದಿದ್ದರೆ, ಇತರರ ರಜೆ ವರ್ಗಾಯಿಸಿಕೊಂಡು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ