ಸಕಾರಾತ್ಮಕ ಲಕ್ಷಣ: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಕೆ!

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿರುವುದರ ಪ್ರಮಾಣ ಕಡಿಮೆಯಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಸಕಾರಾತ್ಮಕ ಲಕ್ಷಣಗಳು ಗೋಚರಿಸುತ್ತಿದೆ. 
ಸಕಾರಾತ್ಮಕ ಲಕ್ಷಣ: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಕೆ!
ಸಕಾರಾತ್ಮಕ ಲಕ್ಷಣ: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಇಳಿಕೆ!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿರುವುದರ ಪ್ರಮಾಣ ಕಡಿಮೆಯಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಸಕಾರಾತ್ಮಕ ಲಕ್ಷಣಗಳು ಗೋಚರಿಸುತ್ತಿದೆ. 

ಸೆ.27 ರಂದು ಅತ್ಯಂತ ಹೆಚ್ಚು ಅಂದರೆ ಪಾಸಿಟಿವಿಟಿ ರೇಟ್ ಶೇ.12.54 ರಷ್ಟಿತ್ತು. ನವೆಂಬರ್ 5 ರ ವೇಳೆಗೆ ಇದು ಶೇ.9.98 ರಷ್ಟಕ್ಕೆ ಇಳಿಕೆಯಾಗಿದ್ದು, ಶುಕ್ರವಾರ ನ.13 ರ ವೇಳೆಗೆ ಶೇ.9.24 ರಷ್ಟಕ್ಕೆ ಇಳಿಕೆಯಾಗಿದೆ ಎಂದು ರಾಜ್ಯ ಕೋವಿಡ್-19 ವಾರ್ ರೂಮ್ ದತ್ತಾಂಶದ ಮೂಲಕ ತಿಳಿದುಬಂದಿದೆ. 

ಜುಲೈ ನಲ್ಲಿ  ಶೇ.3.32 ರಷ್ಟಿದ್ದ ಪಾಸಿಟಿವಿಟಿ ರೇಟ್ ಸೆಪ್ಟೆಂಬರ್ ವೇಳೆಗೆ ಶೇ.12.54ಕ್ಕೆ ಏರಿಕೆಯಾಗಿತ್ತು. ಈ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿತ್ತು.

ಅ.1 ರಂದು ಪಾಸಿಟಿವಿಟಿ ರೇಟ್ ಶೇ.12.24 ರಷ್ಟಿದ್ದು, ಅ.15 ರ ವೇಳೆಗೆ ಶೇ.11.70 ಕ್ಕೆ ಇಳಿಕೆಯಾಗಿತ್ತು. ಅಕ್ಟೋಬರ್ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.10.41 ರಷ್ಟಾಗಿ ನವೆಂಬರ್ ಗೆ ಶೇ.10.32 ರಷ್ಟು ದಾಖಲಾಗುವ ಮೂಲಕ ಇಳಿಕೆಯಾಗಿತ್ತು.

ಇನ್ನು ಮರಣ ಪ್ರಮಾಣವೂ ಕಡಿಮೆಯಾಗಿದ್ದು, ಶೇ.1.33 ರಷ್ಟಿದೆ. ಶುಕ್ರವಾರದಂದು ದಾಖಲಾದ ಅಂಕಿ-ಅಂಶಗಳ ಪ್ರಕಾರ ಚೇತರಿಕೆ ಪ್ರಮಾಣವೂ ಶೇ.95.39 ರಷ್ಟಿದೆ. ವಾರ್ ರೂಮ್ ನಿಂದ ಬಂದಿರುವ ಮಾಹಿತಿಯ ಪ್ರಕಾರ ಕಳೆದ 15 ದಿನಗಳಲ್ಲಿ ಮರಣದ ಪ್ರಮಾಣ ಶೇ.1 ಕ್ಕೆ ಇಳಿಕೆಯಾಗಿದ್ದು, ಕೋವಿಡ್-19 ನಿಯಂತ್ರಣದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com