ಯುಎಇಗೆ ತೆರಳಲು ಮುಂದಾಗಿದ್ದ ಬಿ.ಆರ್. ಶೆಟ್ಟಿಗೆ ವಿಮಾನ ನಿಲ್ದಾಣದಲ್ಲಿ ತಡೆ ಒಡ್ಡಿದ ವಲಸೆ ಅಧಿಕಾರಿಗಳು

ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್‌ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ. 
ಬಿ.ಆರ್. ಶೆಟ್ಟಿ
ಬಿ.ಆರ್. ಶೆಟ್ಟಿ

ಬೆಂಗಳೂರು: ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್‌ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ. 

ಶೆಟ್ಟಿ ಅವರು ಇತ್ತಿಹಾದ್ ವಿಮಾನದಲ್ಲಿ ಯುಎಇಗೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಬಿ.ಆರ್. ಶೆಟ್ಟಿ ಮತ್ತು ಅವರ ಕಂಪನಿಗಳು ಹಣಕಾಸಿನ ಅಕ್ರಮ ಹಾಗೂ ಶತಕೋಟಿ ಡಾಲರ್‌ ವಂಚನೆ ವೆಸಗಿದ ಆರೋಪ ಎದುರಿಸುತ್ತಿದೆ. 

ಇತ್ತಿಹಾದ್ ಇವೈ 217 ವಿಮಾನ ಮೂಲಕ ಅಬುಧಾಬಿಗೆ ತೆರಳಲು ಅವರು ಮಾಡಿದ ಪ್ರಯತ್ನ ವಿಫಲವಾಗಿದೆ. ಯುಎಇಗೆ ಹಿಂದಿರುಗುವ ಭರವಸೆ ನೀಡಿದ್ದೆ. ಈ ಭರವಸೆಯ ಈಡೇರಿಕೆಗಾಗಿ ಅಲ್ಲಿಗೆ ತೆರಳಿದ್ದೆ. ತಮಗೆ ಯುಎಇಯ  ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com