ಖಾಸಗಿ ಶಾಲೆಗಳಲ್ಲಿ ಶುಲ್ಕ ಕಡಿಮೆ ಮಾಡುವಂತೆ ಒತ್ತಾಯಿಸಿ ಪೋಷಕರ ಪ್ರತಿಭಟನೆ

 ಕಾರಣವಿಲ್ಲದೆ ವಿನಾಕಾರಣ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳ  ಸಿಬಿಎಸ್ ಇ ಮತ್ತು ಸಿಐಎಸ್ ಸಿ ಶಾಲೆಗಳ ಸುಮಾರು 200ಕ್ಕೂ ಹೆಚ್ಚು ಪೋಷಕರು ಮಕ್ಕಳ ದಿನವಾದ ನಿನ್ನೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ಪ್ರತಿಭಟನೆ ನಡೆಸಿದರು.
ಪೋಷಕರ ಪ್ರತಿಭಟನೆ
ಪೋಷಕರ ಪ್ರತಿಭಟನೆ

ಬೆಂಗಳೂರು: ಕಾರಣವಿಲ್ಲದೆ ವಿನಾಕಾರಣ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ಮತ್ತು ರಾಜ್ಯದ ವಿವಿಧ ಭಾಗಗಳ ಸಿಬಿಎಸ್ ಇ ಮತ್ತು ಸಿಐಎಸ್ ಸಿ ಶಾಲೆಗಳ ಸುಮಾರು 200ಕ್ಕೂ ಹೆಚ್ಚು ಪೋಷಕರು ಮಕ್ಕಳ ದಿನವಾದ ನಿನ್ನೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ಪ್ರತಿಭಟನೆ ನಡೆಸಿದರು.

ರಾಜ್ಯಸರ್ಕಾರ ಈ ಶಾಲೆಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದು ಗೊತ್ತಿದೆ. ಆದರೆ, ಇದು ವಿದ್ಯಾರ್ಥಿಗಳು ಸುರಕ್ಷತೆಯ ವಿಚಾರವಾಗಿದೆ. ಎರಡನೇ ಅವಧಿಯ ಶುಲ್ಕವನ್ನು ಪಾವತಿಸದಿದ್ದಲ್ಲಿ ಆನ್ ಲೈನ್ ತರಗತಿಗೆ ಅವಕಾಶ ನೀಡುತ್ತಿಲ್ಲ. ತ್ರೈಮಾಸಿಕವಾಗಿ ಶುಲ್ಕ ಪಾವತಿಸಲು ಈ ಶಾಲೆಗಳು ಅವಕಾಶ ನೀಡುತ್ತಿಲ್ಲ ಎಂದು ಪೋಷಕರು ಆರೋಪಿಸಿದರು.

ಸೆಪ್ಟೆಂಬರ್ ತಿಂಗಳಿನಿಂದಲೂ ಶುಲ್ಕ ಪಾವತಿಸದ ಕಾರಣ ಚಿಕ್ಕಬಾಣಾವರ ಶಾಲೆಯೊಂದಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಗನ ಆನ್ ಲೈನ್ ಶಿಕ್ಷಣವನ್ನು ರದ್ದುಪಡಿಸಲಾಗಿದೆ. ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪೋಷಕ ಗಣೇಶ್ ಪೂಜಾರಿ ಹೇಳಿದರು.

ತಮ್ಮ ಮಗು ವ್ಯಾಸಂಗ ಮಾಡುತ್ತಿರುವ ಶಾಲೆಯು ಮೊದಲ ಅವಧಿಯ ಚಟುವಟಿಕೆ ಶುಲ್ಕವನ್ನು ತೆಗೆದುಹಾಕಿದೆ ಆದರೆ ಇದನ್ನು ಎರಡನೇ ಅವಧಿಯ ಶುಲ್ಕದಲ್ಲಿ ಪಟ್ಟಿ ಮಾಡಲಾಗಿದೆ. ಸೌಲಭ್ಯಗಳನ್ನು ಬಳಸದಿರುವುದರಿಂದ ಶೇ. 30 ರಿಂದ 35 ರಷ್ಟು ಶುಲ್ಕವನ್ನು ಕಡಿಮೆ ಮಾಡಬೇಕೆಂದು ಬಯಸುತ್ತಿರುವ ಪೋಷಕರಿಗೆ ಆಘಾತಕಾರಿಯಾಗಿದೆ ಎಂದು ಮತ್ತೊಬ್ಬರು ತಿಳಿಸಿದರು.

ಪೋಷಕರು ಸಹಿ ಹಾಕಿರುವ ಅರ್ಜಿಗಳನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಬೋಧನಾ ಶುಲ್ಕ ಹೆಚ್ಚಳ, ತ್ರೈಮಾಸಿಕವಾಗಿ ಶುಲ್ಕ ಪಾವತಿಗೆ ನಿರಾಕರಣೆ, ಆನ್ ಲೈನ್ ತರಗತಿಗೆ ಶುಲ್ಕ ಪೋಷಕರು ಪ್ರಮುಖ ಕುಂದುಕೊರತೆಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com