ಸಿಎನ್ ಮಂಜುನಾಥ
ಸಿಎನ್ ಮಂಜುನಾಥ

ಫೆಬ್ರವರಿ, ಮಾರ್ಚ್ ನಲ್ಲಿ ಕೊರೋನಾ ಎರಡನೇ ಅಲೆ ಸಂಭವ: ಡಾ. ಸಿಎನ್ ಮಂಜುನಾಥ್ ಎಚ್ಚರಿಕೆ

ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಕೋವಿಡ್-19 ಎರಡನೇ ಅಲೆ ಶುರುವಾಗುವ ಸಂಭವವಿದ್ದು ರಾಜ್ಯದ ಜನತೆ ಹೆಚ್ಚು ಜಾಗೃತಿಯಿಂದ ಇರಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಬೆಂಗಳೂರು: ಮುಂದಿನ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಕೋವಿಡ್-19 ಎರಡನೇ ಅಲೆ ಶುರುವಾಗುವ ಸಂಭವವಿದ್ದು ರಾಜ್ಯದ ಜನತೆ ಹೆಚ್ಚು ಜಾಗೃತಿಯಿಂದ ಇರಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 312-ಎಫ್, ಕರ್ನಾಟಕ ಮಾಧ್ಯಮ ಅಕಾಡೆಮಿ, ಭಾರತೀಯ ವಿದ್ಯಾಭವನ ಆಶ್ರಯದಲ್ಲಿ ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 'ಕೋವಿಡ್-19 ರೋಗ ತಡೆಗಟ್ಟುವಲ್ಲಿ ಮಾಧ್ಯಮಗಳ ಹಾಗೂ ಲಯನ್ಸ್ ಸಂಸ್ಥೆಯ ಪಾತ್ರ'  ವಿಚಾರ ಸಂಕಿರಣ ಹಾಗೂ ಲಯನ್ಸ್ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಚ್ಚರಿಕೆಯಿಂದ ಇದ್ದರೆ ಜೀವ, ಜೀವನವನ್ನು ರಕ್ಷಿಸಿಕೊಳ್ಳಬಹುದು ಎಂದರು.

ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಕೊರೋನಾ ಹಾವಳಿ ಕಡಿಮೆಯಾಗುತ್ತಿದೆ. ಜನರು ಹೆಚ್ಚು ಸುರಕ್ಷತೆ ಕ್ರಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ. 

ಇಂದು ರಾಜ್ಯದಲ್ಲಿ 1,337 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇನ್ನು ಕಳೆದ 24 ಗಂಟೆಯಲ್ಲಿ 16 ಮಂದಿ ಸೋಕಿನಿಂದ ಮೃತಪಟ್ಟಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com