ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದ ಮೂಕಿಯನ್ನು ಗರ್ಭಿಣಿ ಮಾಡಿದ ಜಮೀನು ಮಾಲೀಕ ಅಂದರ್!

ಕೂಲಿ ಕೆಲಸಕ್ಕೆ ಬಂದ ಕಾರ್ಮಿಕ ಮಹಿಳೆಯೊಬ್ಬರನ್ನು ಪುಸಲಾಯಿಸಿ ಲೈಂಗಿಕ ತೃಷೆಗೆ ಬಳಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಪುತ್ತನಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಚಾಮರಾಜನಗರ: ಕೂಲಿ ಕೆಲಸಕ್ಕೆ ಬಂದ ಕಾರ್ಮಿಕ ಮಹಿಳೆಯೊಬ್ಬರನ್ನು ಪುಸಲಾಯಿಸಿ ಲೈಂಗಿಕ ತೃಷೆಗೆ ಬಳಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಪುತ್ತನಪುರದಲ್ಲಿ ನಡೆದಿದೆ.

ಗ್ರಾಮದ ಬಸವಣ್ಣ ಬಿನ್ ಮಲ್ಲದೇವರು ಬಂಧಿತ ಆರೋಪಿ‌. ಜಮೀನು ಕೆಲಸ ಕಾರ್ಯಕ್ಕೆ ಬರುತ್ತಿದ್ದ ಮೂಕಿ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಈಗ ಆಕೆ 6.5 ತಿಂಗಳು ಗರ್ಭಿಣಿ ಎಂದು ತಿಳಿದುಬಂದಿದೆ. 

ಮದುವೆಯಾಗಬೇಕು ಎಂದು ಸಂತ್ರಸ್ತೆ ಪಟ್ಟು ಹಿಡಿದಾಗ ಬಸವಣ್ಣ ಒಲ್ಲೆ ಎಂದಿದ್ದಾನೆ ಎನ್ನಲಾಗಿದೆ. 

ಸಂತ್ರಸ್ಥೆಯ ಸಹೋದರಿ ನ್ಯಾಯ ಕೊಡಿಸಬೇಕೆಂದು ಚಾಮರಾಜನಗರ ಪೂರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

-ಗುಳಿಪುರ ನಂದೀಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com