ನೆಲಮಂಗಲ ಬಳಿಯ ಬಂಧನ ಕೇಂದ್ರದಲ್ಲಿ ಮೊದಲ ಅಕ್ರಮ ವಲಸಿಗ ಸೂಡನ್ ಪ್ರಜೆ!

ದೇಶದಲ್ಲಿ ಹೆಚ್ಚು ಕಾಲ ಇದ್ದುದಕ್ಕಾಗಿ ವಿಚಾರಣೆಗೆ ಒಳಗಾಗಿರುವ ಸೂಡಾನ್ ದೇಶದ ಪ್ರಜೆಯೊಬ್ಬರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಇವರು ಈ ಕೇಂದ್ರದ ಮೊದಲ ಕೈದಿಯಾಗಿದ್ದಾರೆ.
ಬಂಧನ ಕೇಂದ್ರ
ಬಂಧನ ಕೇಂದ್ರ
Updated on

ಬೆಂಗಳೂರು: ದೇಶದಲ್ಲಿ ಹೆಚ್ಚು ಕಾಲ ಇದ್ದುದಕ್ಕಾಗಿ ವಿಚಾರಣೆಗೆ ಒಳಗಾಗಿರುವ ಸೂಡಾನ್ ದೇಶದ ಪ್ರಜೆಯೊಬ್ಬರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಇವರು ಈ ಕೇಂದ್ರದ ಮೊದಲ ಕೈದಿಯಾಗಿದ್ದಾರೆ.

35 ವರ್ಷದ ಒಮರ್ ಅಲ್ತಾಯಬ್ ಹಜಾಹ್ಮದ್ ಅವರನ್ನು ವಿದೇಶಿ ಕಾಯ್ದೆಯಡಿ ಕಳೆದ ವರ್ಷ ಯಲಹಂಕ ನ್ಯೂ ಟೌನ್ ನಲ್ಲಿ ಬಂಧಿಸಲಾಗಿತ್ತು.  2014ರಲ್ಲಿ ವಿದ್ಯಾರ್ಥಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದ ಹಜಾಹ್ಮದ್   ವೀಸಾ ಅವಧಿ 2016ರಲ್ಲಿ ಮುಗಿದಿತ್ತು.
 2019 ಮಾರ್ಚ್ ನಲ್ಲಿ ಆತನ ಪಾಸ್ ಪೋರ್ಟ್ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿಯೇ ಆತ ವಾಸ್ತವ್ಯ ಹೂಡಿದ್ದ.

ವಿಚಾರಣೆ ಮುಗಿದು ಆತನನ್ನು ದೇಶಕ್ಕೆ ಗಡಿಪಾರು ಮಾಡುವವರೆಗೂ ಆತನನ್ನು ಬಂಧನ ಕೇಂದ್ರದಲ್ಲಿಯೇ ಇರಿಸಲಾಗುತ್ತದೆ. ಬಂಧನ ಕೇಂದ್ರದ ಸುತ್ತ  ಒಂದು ಡಜನ್‌ಗೂ ಹೆಚ್ಚು ನಗರ ಸಶಸ್ತ್ರ ಮೀಸಲು  ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಿನಿಂದ 40 ಕಿಲೋ ಮೀಟರ್ ದೂರದಲ್ಲಿನ ನೆಲಮಂಗಲ ಬಳಿಯ ಸೊಂಡೆಕೊಪ್ಪ ಗ್ರಾಮದಲ್ಲಿ ಈ ಬಂಧನ ಕೇಂದ್ರವಿದ್ದು, ಸಮಾಜ ಕಲ್ಯಾಣ ಅಗತ್ಯ ಸೌಕರ್ಯಗಳನ್ನು ಒದಗಿಸಿದೆ. ಕಳೆದ ವರ್ಷವಷ್ಟೇ ಸ್ಥಾಪನೆಯಾಗಿರುವ ನೂತನ ಬಂಧನ ಕೇಂದ್ರದಲ್ಲಿ 40 ಜನರನ್ನು ಬಂಧನದಲ್ಲಿ ಇಡಬಹುದಾಗಿದೆ. ಸೂಕ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com