ಐವಾನ್ ಡಿಸೋಜಾ
ಐವಾನ್ ಡಿಸೋಜಾ

ಕ್ರೈಸ್ತ ಅಭಿವೃದ್ಧಿ ನಿಗಮ ರದ್ದು: ಸರ್ಕಾರದ ವಿರುದ್ಧ ಐವಾನ್ ಡಿಸೋಜಾ ಹೋರಾಟದ ಎಚ್ಚರಿಕೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಪ್ರಸಕ್ತ ಬಿಜೆಪಿ ಸರ್ಕಾರ ರದ್ದುಪಡಿಸಿರುವುದಕ್ಕೆ ಕ್ರೈಸ್ತ ಸಮುದಾಯದ ಮುಖಂಡ ಹಾಗೂ ಮೇಲ್ಮನೆ ಮಾಜಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಆಕ್ರೋಶ ವ್ತಕ್ತಪಡಿಸಿದ್ದಾರೆ.
Published on

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಪ್ರಸಕ್ತ ಬಿಜೆಪಿ ಸರ್ಕಾರ ರದ್ದುಪಡಿಸಿರುವುದಕ್ಕೆ ಕ್ರೈಸ್ತ ಸಮುದಾಯದ ಮುಖಂಡ ಹಾಗೂ ಮೇಲ್ಮನೆ ಮಾಜಿ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಆಕ್ರೋಶ ವ್ತಕ್ತಪಡಿಸಿ ತಕ್ಷಣವೇ ಹೀಗಾಗಿ ಕ್ರೈಸ್ತ ಅಭಿವೃದ್ಧಿ ಪ್ರಾಧಿಕಾರವನ್ನು ತಕ್ಷಣ ರಚನೆ ಮಾಡಬೇಕು ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐವಾನ್ ಡಿಸೋಜಾ, ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಿಸಿ ನಿಗಮಕ್ಕೆ 200 ಕೋಟಿ ರೂ. ಘೋಷಿಸಿ 75 ಕೋಟಿಗಳನ್ನು ಮೀಸಲಿದ್ದರು. ಆದರೆ ಇದೀಗ ಯಡಿಯೂರಪ್ಪ ಸರ್ಕಾರ ನಿಗಮವನ್ನು ರದ್ದುಪಡಿಸಿದೆ. ಮೈತ್ರಿ ಸರ್ಕಾರದಲ್ಲಿ ನಿಗಮ ಘೋಷಿಸಿದ್ದನ್ನು ಯಡಿಯೂರಪ್ಪ ರದ್ದುಪಡಿಸಿದ್ದೇಕೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 30 ಲಕ್ಷ ಕ್ರೈಸ್ತ ಸಮುದಾಯದವರು ರಾಜ್ಯದ 27 ಜಿಲ್ಲೆಗಳಲ್ಲಿಯೂ ಹರಡಿದ್ದಾರೆ. ಕ್ರೈಸ್ತ ಸಮುದಾಯದಲ್ಲಿ ಬಹಳಷ್ಟು ಮಂದಿ ಬಡವರಿದ್ದು, ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ನಮ್ಮ ಕೊಡುಗೆ ಅಪಾರವಾಗಿದೆ. ಆದರೆ ನಿಗಮ ರದ್ದುಪಡಿಸಿದ್ದು ಏಕೆಂದು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com