ಬಳ್ಳಾರಿ ಗಣಿ ಮಾಲೀಕನ ಮಗ ನಿಗೂಢ ನಾಪತ್ತೆ: ತಿಂಗಳಾದರೂ ಇಲ್ಲ ಸುಳಿವು

ಗಣಿನಾಡು ಬಳ್ಳಾರಿಯಲ್ಲಿ ಗಣಿ ಮಾಲೀಕನ ಮಗ ನಿಗೂಢ ನಾಪತ್ತೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ. ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕನ ಮಗ ಪ್ರದೀಪ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ
ನಾಪತ್ತೆಯಾಗಿರುವ ಪ್ರದೀಪ್
ನಾಪತ್ತೆಯಾಗಿರುವ ಪ್ರದೀಪ್
Updated on

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಗಣಿ ಮಾಲೀಕನ ಮಗ ನಿಗೂಢ ನಾಪತ್ತೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ. ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕನ ಮಗ ಪ್ರದೀಪ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕಳೆದ 24 ದಿನಗಳಿಂದ ಹೊಸಪೇಟೆ ಮೂಲದ ಬನಶಂಕರಿ ಮೈನ್ಸ್ ಮಾಲೀಕ ಸುರೇಂದ್ರ ಅವರ ಮಗ ಪ್ರದೀಪ್ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಕಳೆದ ತಿಂಗಳ 26ರಂದು ಮಧ್ಯಾಹ್ನ ಮನೆಯಿಂದ ಹೊರಟಿದ್ದ ಪ್ರದೀಪ್ ಮನೆಗೆ ವಾಪಸ್ಸಾಗಿಲ್ಲ. ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಯುವಕ  ಮರಳಿಲ್ಲ. ಆತನ ಸುಳಿವು ಕೂಡ ದೊರೆತಿಲ್ಲ. 

ಯುವಕನ ನಾಪತ್ತೆ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ. ಮತ್ತೊಬ್ಬ ಗಣಿಯ ಮಾಲೀಕರ ಮಗಳ ಜೊತೆಯಲ್ಲಿ ಪ್ರದೀಪ್ ವ್ಯವಹಾರ ಹೊಂದಿದ್ದು, ಅವರೇ ಮಗನನ್ನು ಅಪಹರಣ ಮಾಡಿಸಿದ್ದಾರೆ ಎನ್ನುವ ಆರೋಪವನ್ನು ಯುವಕನ ಕುಟುಂಬಸ್ಥರು ಮಾಡುತಿದ್ದಾರೆ. ಈ ಸಂಬಂಧ ಹೊಸಪೇಟೆಯ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯ ಹಿಂದೆ ಬ್ಯುಸಿನೆಸ್ ಪಾರ್ಟನರ್ ಕೈವಾಡವಿರಬಹುದು ಎಂದು ಪ್ರದೀಪ್ ಪತ್ನಿ ಆರೋಪಿಸಿದ್ದಾರೆ. ಇನ್ನೂ ಪ್ರಕರಣ ಸಂಬಂಧ ನಾವು ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ್ದು,   ಅದನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ಪ್ರದೀಪ್ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣವನ್ನು ನಾವು ಆದಷ್ಟು ಶೀಘ್ರವೇ ಬಗೆಹರಿಸುವುದಾಗಿ ಬಳ್ಳಾರಿ ಎಸ್ ಪಿ ಸೈದುಲು ಅದ್ವಾತ್ ತಿಳಿಸಿದ್ದಾರೆ.  ನಾವು ತಂಡ ರಚಿಸಿದ್ದು ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com