ಎನ್‌ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: 6.870 ಕೆಜಿ ಮಾದಕ ವಸ್ತು ವಶ, ನಾಲ್ವರ ಬಂಧನ
ಬೆಂಗಳೂರು: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಬೆಂಗಳೂರು ವಲಯದ ಎನ್ ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ, 6.870 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಮಾದಕ ವಸ್ತು ಸಾಗಿಸುತ್ತಿದ್ದ ಶುಕ್ಲಾ ಮತ್ತು ಮರಿಯಾ ಹಾಗೂ ನೈಜೀರಿಯಾ ಮೂಲದ ಒನೊವೋ, ಓಕ್ವರ್ ಬಂಧಿತ ಆರೋಪಿಗಳು.
ಬೇಬಿ ಬ್ಯಾಗಿನಲ್ಲಿ ಇಟ್ಟು ಸಾಗಿಸುತ್ತಿದ್ದ 6.870 ಕೆಜಿ ಸ್ಯೂಡೋಫೆಡ್ರೈನ್ ಮಾದಕ ವಸ್ತುವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಎಫೆಡ್ರೈನ್ ಮತ್ತು ಸ್ಯೂಡೋಫೆಡ್ರಿನ್ ನಂತಹ ವಸ್ತುಗಳು ರಾಸಾಯನಿಕಗಳಾಗಿವೆ, ಡಿಟರ್ಜೆಂಟ್, ಸುಗಂಧ ದ್ರವ್ಯಗಳು, ಬಣ್ಣಗಳು ಮತ್ತಿತರೆ ವಸ್ತುಗಳ ತಯಾರಿಕೆಗೆ ಅದನ್ನು ಬಳಕೆ ಮಾಡಲಾಗುತ್ತದೆ. ಆದರೆ ಅದನ್ನು ಮಾದಕ ವಸ್ತುವಾದ ಆಂಫೆಟಮೈನ್ ಟೈಪ್ ಸ್ಟಿಮ್ಯುಲಂಟ್ (ಎಟಿಎಸ್) ತಯಾರಿಗೂ ಬಳಕೆ ಮಾಡಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇಂತಹಾ ಮಾದಕ ವಸ್ತುಗಳನ್ನು ಆಗ್ನೇಯ ಏಷ್ಯಾ ಹಾಗೂ ಆಫ್ರಿಕಾಗಳಿಗೆ ಅಕ್ರಮವಾಗಿ ರಫ್ತು ಮಾಡಲಾಗುತ್ತಿದೆ ಎನ್ನುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ