ಮಂಗಳೂರು ಬಳಿ ಕದ್ರಿಯಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ: ಪೊಲೀಸರಿಂದ ತನಿಖೆ; ಹಿಂದೂ ಸಂಘಟನೆಗಳ ಧರಣಿ

ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ರಸ್ತೆಬದಿ ಗೋಡೆ ಮೇಲೆ ಗೀಚುಬರಹ ಕದ್ರಿಯಲ್ಲಿ ಕಂಡುಬಂದಿದೆ.
ಉಗ್ರ ಸಂಘಟನೆ ಪರ ಗೋಡೆ ಬರಹ
ಉಗ್ರ ಸಂಘಟನೆ ಪರ ಗೋಡೆ ಬರಹ
Updated on

ಮಂಗಳೂರು: ಲಷ್ಕರ್ ಇ ತೊಯ್ಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ರೀತಿಯಲ್ಲಿ ಕದ್ರಿ ಬಳಿ ಅಪಾರ್ಟ್ ಮೆಂಟ್ ಒಂದರ ಗೋಡೆ ಮೇಲೆ ಗೀಚುಬರಹ ಕಂಡುಬಂದಿದೆ. ಅಪಾರ್ಟ್ ಮೆಂಟ್ ನ ಕಂಪೌಂಡ್ ಮೇಲೆ ಯಾರೋ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ಮಂಗಳೂರಿನ ಕದ್ರಿಯ ಸರ್ಕ್ಯೂಟ್ ಹೌಸ್ ನ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಒಂದರ ಕಂಪೌಂಡ್ ಮೇಲೆ ಹ್ಯಾಶ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆದು ಇಂಗ್ಲಿಷ್ ನಲ್ಲಿ Do not force us to invite Lashkare-Toiba and Taliban to deal with Sanghis and Manvedis' ಎಂದು ಬರೆದಿದ್ದಾರೆ. 

ಈ ಗೋಡೆಬರಹ ಪತ್ತೆಯಾದ ಕೂಡಲೇ ಸುತ್ತಮುತ್ತ ಇರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ತಪಾಸಣೆ ಮಾಡಲಾಗಿದೆ. ಈ ಗೀಚುಬರಹವನ್ನು ಯಾರು ಬರೆದಿದ್ದಾರೆ, ಯಾವಾಗ ಬರೆದಿದ್ದಾರೆ, ಎಲ್ಲಿಯವರು ಎಂದು ಎಲ್ಲಾ ಸಾಧ್ಯತೆಗಳ ಬಗ್ಗೆ  ತಪಾಸಣೆ ಮಾಡುತ್ತಿದ್ದೇವೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ಹಿಂದೂ ಸಂಘಟನೆಗಳ ಧರಣಿ:
ನಗರದ ಸರ್ಕ್ಯೂಟ್ ಹೌಸ್ ಬಳಿಯ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆಯ ಮೇಲೆ 'ಲಷ್ಕರ್ ಜಿಂದಾಬಾದ್' ಬರೆದವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಹಲವಾರು ಹಿಂದೂ ಸಂಘಟನೆಗಳ ಸ್ವಯಂಸೇವಕರು ಶುಕ್ರವಾರ 'ಧರಣಿ' ನಡೆಸಿದ್ದಾರೆ. 

ಬರಹದ ವಿಚಾರ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಬರವಣಿಗೆಯನ್ನು ಅಳಿಸಿದ್ದಾರೆ.

"ಸಂಘಿಗಳು ಮತ್ತು ಮ್ಯಾನ್ ವೀಡಿಯೊಗಳನ್ನು ಎದುರಿಸಲು ಲಷ್ಕರ್-ಎ-ತೈಬಾ ಮತ್ತು ತಾಲಿಬಾನ್ ನನ್ನು ಆಹ್ವಾನಿಸುವ ಒತ್ತಡಕ್ಕೆ ನಮ್ಮನ್ನು ಸಿಲುಕಿಸಬೇಡಿ. # ಲಷ್ಕರ್ ಜಿಂದಾಬಾದ್” ಎಂದು ಬರೆಯಲಾಗಿದೆ. ಬರವಣಿಗೆಯ ಬಗ್ಗೆ ತಿಳಿದುಕೊಂಡ ನಂತರ, ಜನರು ಕಾಂಪೌಂಡ್‌ನ ಮುಂದೆ ಜಮಾಯಿಸಿ, ವಿಷಯ ಮಿತಿ ಮೀರುವ ಮೊದಲು ಬರವಣಿಗೆಗೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com