
ತಿರುವನಂತಪುರಂ: ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸೆ.18ರಂದು ನಾಪತ್ತೆಯಾಗಿದ್ದ ಐದು ವರ್ಷದ ಹೆಣ್ಣು ಮಗು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪತ್ತೆಯಾಗಿದ್ದು, ಮಗು ಅಪಹರಣ ಮಾಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಲೋಕಿತಾ ಮತ್ತೆಯಾದ ಮಗು. ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ಜಾನ್ ಜೋಸೆಫ್(55) ಎಂಬಾತ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾನೂನು ಪ್ರಕ್ರಿಯೆ ಮುಗಿಸಿದ ಬಳಿಕ ಮಗುವನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಅವಳ ತಾತಾ ವಿಜಯ್ ಕುಮಾರ್, ಸೆ.18ರಂದು ಕಾಟನ್‌ಪೇಟೆಯಲ್ಲಿರುವ ತವಕಲ್ ಮಸ್ಕಾನ್ ದರ್ಗಾಕ್ಕೆ ಕರೆದುಕೊಂಡು ಬಂದು ತಾಯಿತ ಕಟ್ಟಿಸಿ ಬಂದಿದ್ದನು.
ಕಾಕ್ಸ್‌ಟೌನ್‌ನಲ್ಲಿರುವ ಮನೆಗೆ ವಾಪಸ್ ಹೋಗಲು ಮಧ್ಯಾಹ್ನ ಒಂದು ಗಂಟೆಯಲ್ಲಿ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಜಾನ್‌ಜೋಸೆಫ್ ತಮಿಳುನಾಡಿಗೆ ಹೋಗಲು ಮೆಜೆಸ್ಟಿಕ್‌ಗೆ ಬಂದಿದ್ದ. ನಿಲ್ದಾಣದಲ್ಲಿ ಜೋಸೆಫ್‌ನ 10 ವರ್ಷದ ಮಗನಿಗೆ ಅಲ್ಲಿಯೇ ಬಸ್‌ಗಾಗಿ ತಾತನೊಂದಿಗೆ ಇದ್ದ ಬಾಲಕಿ, ಇಬ್ಬರು ಆಟವಾಡುತ್ತಿದ್ದರು. ಬಸ್ ಹತ್ತುವ ವೇಳೆ ಜಾನ್‌ಜೋಸೆಫ್ ಬಾಲಕಿಯನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದಾನೆ.
ಈ ಸಂಬಂಧ ಬಾಲಕಿ ತಾತ ಉಪ್ಪಾರಪೇಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮಗನೊಂದಿಗೆ ತಮಿಳುನಾಡಿನ ಎರಡನೇ ಹೆಂಡತಿ ಮನೆಗೆ ಹೋಗಿದ್ದ ಆರೋಪಿ ಜಾನ್‌ಜೋಸೆಫ್ ಅಲ್ಲಿಂದ ಆರೋಪಿ ಜಾನ್‌ಜೋಸೆಫ್ ಅಲ್ಲಿಂದ ಕೇರಳಕ್ಕೆ ಹೋಗಲು ಮುಂದಾಗಿದ್ದರು.
ಬಾಲಕಿ ನಿರಂತರವಾಗಿ ಅಳುತ್ತಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳ ಗಡಿಯಲ್ಲಿ ಮಕ್ಕಳ ಬಗ್ಗೆ ಅಲ್ಲಿನ ಪೊಲೀಸರು ಪ್ರಶ್ನೆ ಮಾಡಿದ್ದರು. ಅಲ್ಲಿನ ಪೊಲೀಸರು ಜಾನ್‌ಜೋಸೆಫ್ ಹಾಗೂ ಮಗುವನ್ನು ಮಾತನಾಡಿಸಿದಾಗ ಅನುಮಾನಗೊಂಡಾಗ ಅಪಹರಣ ಪ್ರಕರಣ ಬೆಳಕಿಗೆ ಬಂದಿತ್ತು.
ಜಾನ್ ಜೋಸೆಫ್ ನನ್ನು ವಿಚಾರಿಸಿದಾಗ ಮಗುವನ್ನು ಭಿಕ್ಷುಕರಿಂದ ರಕ್ಷಿಸಿ ಕರೆದೊಯ್ಯುತ್ತಿದ್ದುದ್ದಾಗಿ ತಿಳಿಸಿದ್ದಾನೆ.
Advertisement