ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುಂಡಿನ ದಾಳಿ: ಬಿಜೆಪಿ ಮುಖಂಡ ಕಳಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಾವು 

ಬಿಜೆಪಿ ನಾಯಕ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣದ ಮುಖ್ಯ ಆರೋಪಿಯು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತನಾಗಿದ್ದಾನೆ.
Published on

ಮಂಗಳೂರು: ಬಿಜೆಪಿ ನಾಯಕ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣದ ಮುಖ್ಯ ಆರೋಪಿಯು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹತನಾಗಿದ್ದಾನೆ.

ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಸಂಪತ್ ಮೃತಪಟ್ಟಿರುವುದಾಗಿ ಸುಲಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ.

ಬೆಳಿಗ್ಗೆ ಶಾಂತಿನಗರದಲ್ಲಿರುವ ತನ್ನ ಮನೆಯಿಂದ ಹೊರಬಂದಾಗ ಸಂಪತ್‌ ಮೇಲೆ ಗುಂಡಿನ ದಾಳಿಯಾಗಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.ಗುಂಡು ಹಾರಿಸಿದ ಬಳಿಕ ಹಲ್ಲೆಕೋರರು ವಾಹನದಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.

ಗುಂಡಿನ ದಾಳಿಯ ಜತೆಗೆ ಮಚ್ಚು ಮೊದಲಾದ ಆಯುಧಗಳಿಂದಲೂ ಸಂಪತ್ ತಲೆಬುರುಡೆಯ ಮೇಲೆ ಬಲವಾಗಿ ಹೊಡೆಯಲಾಗಿದೆ. ಹಲ್ಲೆಕೋರರು ಆತನಿಗೆ ಪರಿಚಿತರೇ ಆಗಿರಬಹುದು ಎಂಬುದು ನಮ್ಮ ಆರಂಭಿಕ ತನಿಖೆಯ ಆಧಾರದ ಮೇಲೆ ತಿಳಿದುಬಂದಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಒಂದು ವರ್ಷದ ಹಿಂದೆ ಬಿಜೆಪಿ ನಾಯಕ ಬಾಲಚಂದ್ರ ಕಳಗಿಯನ್ನು ಕೊಲೆ ಮಾಡಿದ್ದ ಆರೋಪ ಸಂಪತ್ ಮೇಲಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com