ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ರತ್ಯೇಕ ಅವಘಡ: ನೀರಿನಿಲ್ಲ ಮುಳುಗಿ ಮೂವರು ಜಲಸಮಾಧಿ

ಕರ್ನಾಟಕದಲ್ಲಿ ನಡೆದ ಎರಡು ಪ್ರತ್ಯೇಕ ಅವಘಡದಲ್ಲಿ ಮೂವರು ನೀರಿನಲ್ಲಿ ಮುಳುಗಿ ಜಲ ಸಮಾಧಿಯಾಗಿದ್ದಾರೆ. 

ಕಲಬುರಗಿ/ರಾಯಚೂರು: ಕರ್ನಾಟಕದಲ್ಲಿ ನಡೆದ ಎರಡು ಪ್ರತ್ಯೇಕ ಅವಘಡದಲ್ಲಿ ಮೂವರು ನೀರಿನಲ್ಲಿ ಮುಳುಗಿ ಜಲ ಸಮಾಧಿಯಾಗಿದ್ದಾರೆ. 

ಕಲಬುರಗಿಯ ಹಳೆ ಶಹಾಬಾದ್ ಪಟ್ಟಣದ ವಿಶ್ವಾರಾಧ್ಯ ದೇವಸ್ಥಾನದ ಬಳಿ ಭಾನುವಾರ ನಡೆದಿದ್ದು ಶಹಾಬಾದ್ ಪಟ್ಟಣದ ವಿಶ್ವನಾಥ ತಂದೆ ರಾಜು (15) ಹಾಗೂ ತೇಜಸ್ವಿ ಪೂರ್ಣಚಂದ್ರ ತಂದೆ ಆನಂದ(14) ಮೃತ ಬಾಲಕರು.

ಮಸ್ಕಿ ಹಳ್ಳದಲ್ಲಿ ಕೊಚ್ಚಿಹೋದ ಓರ್ವ, ಮೂವರು ಪಾರು
ರಾಯಚೂರು: ಜಿಲ್ಲೆಯ ಮಸ್ಕಿ ಡ್ಯಾಂನಿಂದ‌ ಭಾರಿ ಪ್ರಮಾಣದ ನೀರು ಹರಿಬಿಟ್ಟ ಹಿನ್ನೆಲೆಯಲ್ಲಿ ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಯುವಕರು ನಡುದಿಬ್ಬದಲ್ಲೇ ಸಿಲುಕಿಕೊಂಡಿದ್ದರು. ಆದರೆ, ರಕ್ಷಣಾ ಕಾರ್ಯ ವಿಫಲಗೊಂಡ ಪರಿಣಾಮ ಯುವಕನೋರ್ವ ಕೊಚ್ಚಿಕೊಂಡು ಹೋಗಿದ್ದಾನೆ.

ಮಸ್ಕಿ ಪಟ್ಟಣ ನಿವಾಸಿ ಚನ್ನಬಸವ ಕೊಚ್ಚಿ ಹೋಗಿರುವ ಯುವಕ. ಭಾನುವಾರ ನಸುಕಿನಲ್ಲಿ ಚನ್ನಬಸವ ಮತ್ತು ಜಲೀಲ್‌ ಬಹಿರ್ದೆಸೆಗೆ ತೆರಳಿದ್ದರು‌. ಈ ವೇಳೆ ಏಕಾಏಕೀ  ಹಳ್ಳದ ನೀರು ಹರಿದಾಗ ಕಲ್ಲುಬಂಡೆಗಳ ಮೇಲೆ ಪ್ರತ್ಯೇಕವಾಗಿ ನಿಂತಿದ್ದರು. ನಂತರ ವಿಷಯ ತಿಳಿಯುತ್ತಿದ್ದಂತೆ ಇಬ್ಬರೂ ಯುವಕರನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆ ಕಾರ್ಯಾಚರಣೆಗೆ ಮುಂದಾಗಿದ್ದರು.

Related Stories

No stories found.

Advertisement

X
Kannada Prabha
www.kannadaprabha.com