ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್

ಸಾರಿಗೆ ಇಲಾಖೆಯ ಪ್ರಸಕ್ತ ಸಾಲಿನ ಆದಾಯ ಗುರಿಯಲ್ಲಿ ಶೇ.90 ರಷ್ಟು ಪ್ರಗತಿ ಸಾಧ್ಯತೆ

ಕೋವಿಡ್ -19 ಕಾರಣದಿಂದಾಗಿ ಜನರು ಸಾರ್ವಜನಿಕ ವಾಹನಗಳ ಬದಲಿಗೆ ಹೆಚ್ಚಾಗಿ ಖಾಸಗಿ ವಾಹನಗಳನ್ನು ಬಳಸುತ್ತಿರುವುದರಿಂದ 2020-21ನೇ ಸಾಲಿನಲ್ಲಿ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಾಗಿರುವುದರಿಂದ ಸಾರಿಗೆ ಇಲಾಖೆ ನಿಗದಿತ 6. 617 ಕೋಟಿ ವಾರ್ಷಿಕ ಆದಾಯ ಗುರಿಯೊಂದಿಗೆ ಶೇ.90 ರಷ್ಟು ಪ್ರಗತಿಯನ್ನು ಸಾಧಿಸುವ ಸಾಧ್ಯತೆಯಿದೆ.

ಬೆಂಗಳೂರು: ಕೋವಿಡ್ -19 ಕಾರಣದಿಂದಾಗಿ ಜನರು ಸಾರ್ವಜನಿಕ ವಾಹನಗಳ ಬದಲಿಗೆ ಹೆಚ್ಚಾಗಿ ಖಾಸಗಿ ವಾಹನಗಳನ್ನು ಬಳಸುತ್ತಿರುವುದರಿಂದ 2020-21ನೇ ಸಾಲಿನಲ್ಲಿ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಾಗಿರುವುದರಿಂದ ಸಾರಿಗೆ ಇಲಾಖೆ ನಿಗದಿತ 6. 617 ಕೋಟಿ ವಾರ್ಷಿಕ ಆದಾಯ ಗುರಿಯೊಂದಿಗೆ ಶೇ.90 ರಷ್ಟು ಪ್ರಗತಿಯನ್ನು ಸಾಧಿಸುವ ಸಾಧ್ಯತೆಯಿದೆ.

ಸಾಂಕ್ರಾಮಿಕ ರೋಗದಿಂದಾಗಿ ಸಾರಿಗೆ ಇಲಾಖೆ ಗಳಿಸಬಹುದಾದ ವಾರ್ಷಿಕ ಆದಾಯವನ್ನು ಪರಿಷ್ಕರಿಸಿದ್ದು, 4900 ಕೋಟಿ ರೂ. ಗಳಿಸಬಹುದೆಂದು ಲೆಕ್ಕಾಚಾರ ಹಾಕಿದೆ. ಆದಾಗ್ಯೂ, ಕೆಲ ದಿನಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆ ಹೆಚ್ಚಳವಾಗಿದ್ದು, 6.617 ಕೋಟಿ ಆದಾಯ ಗುರಿಯೊಂದಿಗೆ ಶೇ. 90 ರಷ್ಟು ಪ್ರಗತಿ ಸಾಧಿಸುವ ಸಾಧ್ಯತೆಯಿದೆ.

ಸೆಪ್ಟೆಂಬರ್ ತಿಂಗಳಲ್ಲಿ 1, 06,039 ವಾಹನಗಳು ನೋಂದಣಿಯಾಗಿದ್ದು, 478 ಕೋಟಿ ಆದಾಯ ಬಂದಿದೆ. ಅಕ್ಟೋಬರ್ 1-7ರ ನಡುವೆ 5 ಸಾವಿರದ 951 ವಾಹನಗಳು ನೋಂದಣಿಯಾಗಿವೆ. ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಸಾರಿಗೆ ಇಲಾಖೆ ಮೇಲೆ ಸರ್ಕಾರದ ಒತ್ತಡ ಕೂಡಾ ಹೆಚ್ಚಾಗಿದೆ.

ಕಳೆದ ತಿಂಗಳು ಶೇ. 86 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಮುಂದಿನ ತಿಂಗಳಲ್ಲಿ ವಾಹನಗಳ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಸಾರಿಗೆ ಆಯುಕ್ತ ಎನ್. ಶಿವಕುಮಾರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಜೂನ್ ನಿಂದ ವಾಹನಗಳ ನೋಂದಣಿ ಜಾಸ್ತಿಯಾಗಿದೆ. ಜೂನ್ ತಿಂಗಳಲ್ಲಿ 92 ಸಾವಿರ ವಾಹನಗಳ ನೋಂದಣಿಯಾಗಿತ್ತು. ಜುಲೈನಲ್ಲಿ 72 ಸಾವಿರ ವಾಹನಗಳ ನೋಂದಣಿಯಾಗಿದೆ.ಈ ವರ್ಷದ ಅಂತ್ಯದಲ್ಲಿ ಇಲಾಖೆ  5 ಸಾವಿರ ಕೋಟಿ ರೂ. ಆದಾಯ ಗಳಿಸುವ ಸಾಧ್ಯತೆಯಿರುವುದಾಗಿ ಹೆಚ್ಚುವರಿ ಆಯುಕ್ತ ಮತ್ತು ಸಾರಿಗೆ ಇಲಾಖೆ ಕಾರ್ಯದರ್ಶಿ ಹೇಮಂತ್ ಕುಮಾರ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com