ತುಮಕೂರಿನಲ್ಲಿ ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆ
ತುಮಕೂರು: ಕೊರೋನಾ ಸೋಂಕಿಗೊಳಗಾಗಿ ಐಸಿಯುವಿನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುವ ರೋಗಿಗಳ ರಕ್ಷಿಸಲು ಕೊರೋನಾ ಚಿಕಿತ್ಸೆಗೆ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಘಟಕ ಸ್ಥಾಪನೆ ಮಾಡಲಾಗಿದೆ.
ರೂ.16 ಲಕ್ಷ ವೆಚ್ಚ ಯೋಜನೆಯನ್ನು ಖಾಸಗಿ ಸಂಸ್ಥೆಗಳು ಪೂರ್ಣಗೊಳಿಸಿದ್ದು, ಕೇವಲ ಒಂದೂವರೆ ತಿಂಗಳಿನಲ್ಲಿ 21 ಐಸಿಯು ಹಾಗೂ 200 ಹಾಸಿಗೆಗಳನ್ನು ಹೊಂಡಿರುವ ಆಸ್ಪತ್ರೆಗಳಲ್ಲಿ 6,000 ಸಾಮರ್ಥ್ಯವಿರುವ ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದಾರೆ. ಪ್ರತೀನಿತ್ಯ ಈ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು 1,200 ಲೀಟಲ್ ಆಕ್ಸಿಜನ್ ಅಗತ್ಯವಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಿಎಂಸಿಸಿ ಅಧ್ಯಕ್ಷ ಎನ್ ಎಸ್ ಜಯಕುಮಾರ್ ಅವರು ಮಾತನಾಡಿ, ಆಸ್ಪತ್ರೆಯಲ್ಲಿ 10 ಲಕ್ಷ ರೂ.ಗಳ ವೆಚ್ಚದಲ್ಲಿ ಆಮ್ಲಜನಕದ ಪೈಪ್‌ಲೈನ್ ಅಳವಡಿಸಲಾಗಿದ್ದು, ಈ ಆಮ್ಲಜನಕದಿಂದ 100 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಡಾ.ವೀರಭದ್ರಯ್ಯ ಅವರು ಮಾತನಾಡಿ, ಕೊರೋನಾ ಪರಿಸ್ಥಿತಿ ನಿಭಾಯಿಸಲು ತರಬೇತಿ ಪಡೆಯಲಿರುವ 10 ಮಂದಿ ನರ್ಸ್ ಗಳು ಹಾಗೂ 10 ಮಂದಿ ಡಿ-ಗ್ರೂಪ್ ನೌಕರರನ್ನು ನೇಮಕ ಮಾಡಲು ಸರ್ಕಾರದ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಐಸಿಯುವಿನ ಸಾಮರ್ಥ್ಯವನ್ನು ವಾರದಲ್ಲಿ 30 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ 110 ಕ್ಕೂ ಹೆಚ್ಚು ರೋಗಿಗಳನ್ನು ಐಸಿಯುಗಳಲ್ಲಿ ದಾಖಲು ಮಾಡುವಂತೆ ಸೂಚಿಸಲಾಗುತ್ತಿದೆ. ಇದಕ್ಕಾಗಿ ಪ್ರತೀ ಸೋಂಕಿತರಿಗೆ ದಿನಕ್ಕೆ 10,000 ರಿಂದ 30,000 ರೂ.ವರೆಗೆ ದರ ವಿಧಿಸಲಾಗುತ್ತಿದೆ. ಸೋಂಕು ಪೀಡಿತ ಜನರು ನಮ್ಮೊಂದಿಗೆ ದೂರು ನೀಡಿದರೆ, ಹೆಚ್ಚಿನ ಶುಲ್ಕ ವಿಧಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ ಎಂದು ಇದೇ ವೇಳೆ ವೀರಭದ್ರಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ