ಬೆಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಮೂವರ ಬಂಧನ

ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸದವರ ವಿರುದ್ಧ ದೂರು ದಾಖಲಿಸುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾರ್ಲ್ ಮಾರ್ಕ್ಸ್(25), ಶಿವಕುಮಾರ್(54), ಎಸ್ ಬಾಬು(40) ಬಂಧಿತ ಆರೋಪಿಗಳು.

ಅ.13ರಂದು ಬಿಬಿಎಂಪಿ ಮಾರ್ಷಲ್ ಮುನಿರಾಜು ಅವರೊಂದಿಗೆ ಗೋಕುಲದಲ್ಲಿ ಗಸ್ತಿನಲ್ಲಿದ್ದಾಗ ಗೋಕುಲ ಬ್ರಿಡ್ಜ್ ಕೆಳಗಡೆ ಹಳೆ ರೈಲ್ವೆ ಗೇಟ್ ಹತ್ತಿರ ಇರುವ ಬಾಬು ಮೋಟಾರ್ಸ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಓರ್ವ ವ್ಯಕ್ತಿ ಗ್ಯಾರೇಜ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದನು. ಈ ವೇಳೆ ಮಾಸ್ಕ್ ಏಕೆ ಧರಿಸಿಲ್ಲ ಎಂದು ಬಿಬಿಎಂಪಿ ಮಾರ್ಷಲ್ ಪ್ರಶ್ನಿಸಿದಾಗ ಗ್ಯಾರೇಜ್ ಬಳಿ ಇದ್ದ ಶಿವಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ನಮ್ಮನ್ನು ಯಾಕೆ ಬೈಯುತ್ತಿದ್ದೀರಿ ಎಂದು ನಾವು ಕೇಳುತ್ತಿದ್ದಾಗ ಗ್ಯಾರೇಜ್ ನಲ್ಲಿದ್ದ ಕಾರ್ಲ್ ಮಾರ್ಕ್ಸ್ ಎಂಬಾತ ಸ್ಥಳಕ್ಕೆ ಬಂದು ನಮಗೇನು ಕೊರೊನಾ ಇದೆಯೇ? ನಾವು ಯಾಕೆ ಮಾಸ್ಕ್ ಹಾಕಬೇಕು? ನಾವು ಮಾಸ್ಕ್ ಹಾಕುವುದಿಲ್ಲ. ದಂಡವನ್ನೂ ಕಟ್ಟುವುದಿಲ್ಲ ಏನು ಮಾಡಕೊಳುತ್ತಿರೋ ಮಾಡಿಕೊಳ್ಳಿ ಎಂದು ಹೇಳಿ ಏಕಾಏಕಿ ನಮ್ಮ ಮೇಲೆ ಗಲಾಟೆ ಮಾಡಿ, ನಮಗೆ ಅವ್ಯಚ್ಛ ಶಬ್ದಗಳಿಂದ ನಿಂದಿಸಿದರು. ಆಗ ಅಲ್ಲೇ ಇದ್ದ ಗ್ಯಾರೇಜ್ ಮಾಲೀಕ ಬಾಬು ಎಂಬುವವರು ಬಂದು ನನ್ನ ಕೈಗಳನ್ನು ಹಿಡಿದುಕೊಂಡಿದ್ದು, ಕಾರ್ಲ್ ಮಾರ್ಕ್ಸ್ ನನ್ನ ಎಡ ಭಾಗದ ಕೆನ್ನೆಗೆ ಗುದ್ದಿದಲ್ಲದೇ, ಸಮವಸ್ತ್ರ ಹಿಡಿದು ಎಳೆದಾಡಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ಅಶ್ವಥಯ್ಯ ಹಾಗೂ ಸಿಬ್ಬಂದಿ ಮೊ.ಸಂ.89/2020 ಕಲಂ 353, 332, 504 ರೆ/ವಿ 34 ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com