ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಿ: ಸಾರಿಗೆ ಇಲಾಖೆಯ ಆದೇಶ

ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ.

ನೊಟೀಸ್ ನಲ್ಲಿ, ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರಿಗೆ ಕಡ್ಡಾಯವಾಗಿ 500 ರೂಪಾಯಿ ದಂಡ ಮತ್ತು ಅವರ ಡ್ರೈವಿಂಗ್ ಲೈಸೆನ್ಸ್ ನ್ನು ಮೂರು ತಿಂಗಳವರೆಗೆ ರದ್ದುಪಡಿಸಬೇಕೆಂದು ಸೂಚಿಸಲಾಗಿದೆ.

ನೂತನ ಮೋಟಾರ್ ವಾಹನ ಕಾಯ್ದೆ ಕಳೆದ ವರ್ಷ ಸೆಪ್ಟೆಂಬರ್ 1ರಂದು ಜಾರಿಗೆ ಬಂದಿತ್ತು. ಆದರೆ ತಳಮಟ್ಟದಲ್ಲಿ ಅದನ್ನು ಜಾರಿಗೆ ತರುವ ಬಗ್ಗೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರುವ ಕೆಲಸವಾಗಿಲ್ಲ. ನಿಯಮ ಉಲ್ಲಂಘಿಸಿದವರಿಗೆ ಕಡ್ಡಾಯವಾಗಿ ದಂಡ ಮತ್ತು ಲೈಸೆನ್ಸ್ ರದ್ದುಪಡಿಸಲು ಎಲ್ಲಾ ಅಧಿಕಾರಿಗಳಿಗೆ ಹೇಳಬೇಕೆಂದು ನೊಟೀಸ್ ನಲ್ಲಿ ತಿಳಿಸಲಾಗಿದೆ. ಹೆಲ್ಮೆಟ್ ಧರಿಸುವ ನಿಯಮ ಚಲಾಯಿಸುವವರಿಗೆ ಮತ್ತು ಹಿಂಬದಿ ಪ್ರಯಾಣಿಕರಿಗೆ ಕಡ್ಡಾಯವಾಗಿರುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ.

ಉತ್ತರ ಸಂಚಾರ ವಿಭಾಗದ ಉಪ ಆಯುಕ್ತ ಸಜೀತ್ ವಿ ಜೆ, ಟ್ರಾಫಿಕ್ ಪೊಲೀಸರಿಗೆ ಪರವಾನಗಿ ರದ್ದು ಮಾಡುವ ಅಧಿಕಾರವಿಲ್ಲ, ಅವರು ಆರ್ ಟಿಒ ಅಧಿಕಾರಿಗಳಿಗೆ ಡಿಎಲ್ ರದ್ದುಪಡಿಸುವ ಬಗ್ಗೆ ಬರೆಯಬೇಕು. ಇದುವರೆಗೆ ಈ ನಿಯಮ ಉಲ್ಲಂಘಿಸಿದ ಸಾವಿರದಿಂದ 2 ಸಾವಿರ ಲೈಸೆನ್ಸ್ ಗಳನ್ನು ರದ್ದು ಮಾಡುವಂತೆ ಶಿಫಾರಸು ಮಾಡಲಾಗಿದೆ. ಸೆಪ್ಟೆಂಬರ್ 31ರವರೆಗೆ ಬೆಂಗಳೂರು ಸಂಚಾರ ಪೊಲೀಸರು 20.7 ಲಕ್ಷ ನಿಯಮ ಉಲ್ಲಂಘನೆ ಕೇಸು ದಾಖಲಿಸಿದ್ದಾರೆ. ಅದರ ಜೊತೆಗೆ 12.5 ಲಕ್ಷ ಹಿಂಬದಿ ಪ್ರಯಾಣಿಕರಿಗೆ ಕಡ್ಡಾಯವಾಗಿದೆ ಎಂದರು.

ಕಳೆದ ಸೆಪ್ಟೆಂಬರ್ 13ರಿಂದ 19ರವರೆಗೆ ಪೊಲೀಸರು 48,141 ಕೇಸುಗಳನ್ನು ದಾಖಲಿಸಿದ್ದು, 2 ಕೋಟಿಯ 14 ಲಕ್ಷದ 38 ಸಾವಿರ ಹಣವನ್ನು ಸಂಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com