ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕೋವಿಡ್-19 ಸಂತ್ರಸ್ತನ ಶವಪರೀಕ್ಷೆ: ರಕ್ತ ಹೆಪ್ಪುಗಟ್ಟುವಿಕೆ ಜೊತೆಗೆ ಗಡುಸಾದ ಶ್ವಾಸಕೋಶಗಳು ಪತ್ತೆ

ಆಕ್ಸ್ ಪರ್ಡ್  ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾ. ದಿನೇಶ್ ರಾವ್ , ಬುಧವಾರ ಕೋವಿಡ್-19 ನಿಂದ ಮೃತಪಟ್ಟ 60 ವರ್ಷದ  ವ್ಯಕ್ತಿಯ ಶವಪರೀಕ್ಷೆಯನ್ನು ಮೊದಲ ಬಾರಿಗೆ  ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಕ್ಸ್ ಪರ್ಡ್  ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾ. ದಿನೇಶ್ ರಾವ್ , ಬುಧವಾರ ಕೋವಿಡ್-19 ನಿಂದ ಮೃತಪಟ್ಟ 60 ವರ್ಷದ  ವ್ಯಕ್ತಿಯ ಶವಪರೀಕ್ಷೆಯನ್ನು ಮೊದಲ ಬಾರಿಗೆ ನಡೆಸಿದ್ದಾರೆ.

ಕೋವಿಡ್-19 ಸೋಂಕಿತ ರೋಗಿ ಮರಣದ ಹದಿನೈದು ಗಂಟೆಗಳ ನಂತರ ಮುಖದ ಚರ್ಮ, ಕುತ್ತಿಗೆ ಅಥವಾ ಉಸಿರಾಟದ ಮಾರ್ಗ ಮತ್ತು ಶ್ವಾಸಕೋಶಗಳಲ್ಲಿ ಸೋಂಕಿನ ಯಾವುದೇ ಕುರುಹುಗಳನ್ನು ವಿಧಿ ವಿಜ್ಞಾನ ತಜ್ಞರು  ಗುರುತಿಸಿಲ್ಲ, ಅವರು ತೆಗೆದುಕೊಂಡ ಅನೇಕ ಮಾದರಿಗಳನ್ನು ಸಹ ಎಸೆದಿಲ್ಲ. 

ಆದರೆ, ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಮೂರು ಮತ್ತು ಗಂಟಲಿನಲ್ಲಿ ವೈರಸ್ ಸುಪ್ತವಾಗಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಸ್ಪಂಜಿನ ಚೆಂಡಿನಂತೆ ಮೃದುವಾಗಿರುವ  ಶ್ವಾಸಕೋಶಗಳು, ಲೆದರ್ ಚೆಂಡಿನಂತೆ ಗಡುಸಾಗಿರುವುದನ್ನು ಡಾ. ರಾವ್ ಗುರುತಿಸಿದ್ದಾರೆ. 

ಶ್ವಾಸಕೋಶಗಳ ಸಾಮಾನ್ಯ ತೂಕ 600ರಿಂದ 700 ಗ್ರಾಂ ಇರುತ್ತದೆ. ಆದರೆ, ಕೋವಿಡ್-19 ಸಂತ್ರಸ್ತನ ಶ್ವಾಸಕೋಶಗಳು 2.1 ಕೆಜಿ ಇದದ್ದು ಕಂಡುಬಂದಿದೆ. ಚರ್ಮದ ವಿನ್ಯಾಸವು ಮೃದುವಾಗಿರಲಿಲ್ಲ. ರಕ್ತ ಹೆಪ್ಪುಗಟ್ಟಿತ್ತು ಮತ್ತು ಶ್ವಾಸಕೋಶಗಳಿಗೆ ವೈರಸ್ ಏನು ಮಾಡಿದೆ ಎಂಬುದನ್ನು ನೋಡಿ ಆಘಾತಕಾರಿಯಾಯಿತು ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ವೈರಸ್ ಆಕ್ರಮಣ ಭಿನ್ನವಾಗಿರುತ್ತದೆ ಎಂಬುದನ್ನು ಈ ಅಧ್ಯಯನ ತೋರಿಸಿದೆ. ವಿಶ್ವದ ಇಟಲಿ ಅಥವಾ ಇತರ ರಾಷ್ಟ್ರಗಳಲ್ಲಿ ಕಂಡುಬರುವುದಕ್ಕಿಂತಲೂ ಇದು ವಿಭಿನ್ನವಾಗಿದ್ದು, ಶ್ವಾಸಕೋಶಗಳಿಗೆ ಆಕ್ರಮಣ ಮಾಡುತ್ತಿದೆ ಎಂದು ಡಾ. ರಾವ್ ಹೇಳಿದ್ದಾರೆ.

ಈ ಅಧ್ಯಯನವನ್ನು ಶೀಘ್ರದಲ್ಲಿಯೇ ವೈಜ್ಞಾನಿಕ ಜರ್ನಲ್ ನಲ್ಲಿ ಪ್ರಕಟಿಸಲಾಗುವುದು, ಇದದಿಂದ ಹೆಚ್ಚಿನ ಸಂಶೋಧನೆ ಮಾಡಿ ಕಾಯಿಲೆ ಬಗ್ಗೆ ತಿಳಿಯಲು ಮತ್ತು ಮರಣ ಪ್ರಮಾಣ ಕಡಿಮೆಯಾಗಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com