ಪ್ಲಾಸ್ಮಾ
ರಾಜ್ಯ
ಜೀವ ಉಳಿಸಲು ಏರ್ ಲಿಫ್ಟ್: ಬೆಂಗಳೂರಿನಿಂದ ಜಮ್ಮು ಕಾಶ್ಮೀರದ ಶ್ರೀನಗರ ತಲುಪಿತು ಪ್ಲಾಸ್ಮಾ
ರೋಗಿಯ ಜೀವ ಉಳಿಸಲು ಹೃದಯ ಮತ್ತು ಇತರ ಪ್ರಮುಖ ಭಾಗಗಳನ್ನು ತುರ್ತಾಗಿ ವರ್ಗಾಯಿಸುವುದನ್ನು ನೋಡಿದ್ದೇವೆ. ಅದರೆ, ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತ 60 ವರ್ಷದ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ವಿಮಾನದ ಮೂಲಕ ನಗರದಿಂದ ಪ್ಲಾಸ್ಮಾವನ್ನು ಜಮ್ಮು ಕಾಶ್ಮೀರಕ್ಕೆ ರವಾನಿಸಲಾಗಿದೆ.
ಬೆಂಗಳೂರು: ರೋಗಿಯ ಜೀವ ಉಳಿಸಲು ಹೃದಯ ಮತ್ತು ಇತರ ಪ್ರಮುಖ ಭಾಗಗಳನ್ನು ತುರ್ತಾಗಿ ವರ್ಗಾಯಿಸುವುದನ್ನು ನೋಡಿದ್ದೇವೆ. ಅದರೆ, ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತ 60 ವರ್ಷದ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ವಿಮಾನದ ಮೂಲಕ ನಗರದಿಂದ ಪ್ಲಾಸ್ಮಾವನ್ನು ಜಮ್ಮು ಕಾಶ್ಮೀರಕ್ಕೆ ರವಾನಿಸಲಾಗಿದೆ.
ಈಮಹಿಳೆ ಶ್ರೀನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಸ್ಥಿತಿ ಗಂಭೀರವಾಗಿತ್ತು. ಆದ್ದರಿಂದ ಆಕೆಯ ಸಂಬಮಧಿಕರು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿನ ಪ್ಲಾಸ್ಮಾ ಬ್ಯಾಂಕ್ ಸಂಪರ್ಕಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ಲಾಸ್ಮಾ ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ನೇತೃತ್ವದ ವೈದ್ಯರ ತಂಡವು ಎರಡು ಯುನಿಟ್ ಪ್ಲಾಸ್ಮಾವನ್ನು 3 ಸಾವಿರ ಕಿ.ಮೀ. ದೂರದಲ್ಲಿರುವ ರೋಗಿಗೆ ಇಂಡಿಗೋ ಕಾರ್ಗೊ ವಿಮಾನದ ಮೂಲಕ ಮಂಗಳವಾರ ತಲುಪಿಸಿದೆ. ವಿಮಾನವು ಬೆಂಗಳೂರಿನಿಂದ ದೆಹಲಿ ತಲುಪಿ, ಶ್ರೀನಗರ ತಲುಪಿದೆ. ಅಲ್ಲಿನ ವೈದ್ಯರು ಮಹಿಳೆಗೆ ಪ್ಲಾಸ್ಮಾ ಥೆರಪಿಯನ್ನು ಪ್ರಾರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ