ಬೆಂಗಳೂರು: 800 ಕೋಟಿ ಮೌಲ್ಯದ 120 ಎಕರೆ ಅತಿಕ್ರಮಣ ಆನೆಕಲ್ ಅರಣ್ಯ ಭೂಮಿ ವಶ

ಆನೇಕಲ್ ವಲಯದಲ್ಲಿ ಅತಿಕ್ರಮಣ ಮಾಡಿಕೊಂಡ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಇದುವರೆಗೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 120 ಎಕರೆ ಅತಿಕ್ರಮಿಸಿದ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು ಮೌಲ್ಯ ಸುಮಾರು 700ರಿಂದ 800 ಕೋಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅತಿಕ್ರಮಣ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದು
ಅತಿಕ್ರಮಣ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದು
Updated on

ಬೆಂಗಳೂರು: ಆನೇಕಲ್ ವಲಯದಲ್ಲಿ ಅತಿಕ್ರಮಣ ಮಾಡಿಕೊಂಡ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಇದುವರೆಗೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 120 ಎಕರೆ ಅತಿಕ್ರಮಿಸಿದ ಅರಣ್ಯ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು ಮೌಲ್ಯ ಸುಮಾರು 700ರಿಂದ 800 ಕೋಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಈ ಅರಣ್ಯ ಪ್ರದೇಶಗಳಿವೆ. ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡವರು ಕಳೆದ ವರ್ಷ ರಿಟ್ ಅರ್ಜಿ ಸಲ್ಲಿಸಿದ್ದು ತಿರಸ್ಕೃತಗೊಂಡ ನಂತರ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿದ ನಂತರ ಅರಣ್ಯ ಇಲಾಖೆ ಒತ್ತುವರಿ ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ಹೊರಟಿತು. ಬೂತನಹಳ್ಳಿ ಕಿರು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣಕಾರರು ಸುಮಾರು 180 ಎಕರೆ ಜಮೀನನ್ನು ವಶಪಡಿಸಿಕೊಂಡು ಅತಿಥಿ ಲೇ ಔಟ್ ನ್ನಾಗಿ ಮಾಡಿ ಸುಮಾರು 300 ಸೈಟ್ ಗಳನ್ನು ಮಾರಾಟ ಮಾಡಿದ್ದರು.

ಇನ್ನೂ ಸುಮಾರು 60 ಎಕರೆ ಅಕ್ರಮ ಲೇ ಔಟ್ ಗಳನ್ನು ವಶಪಡಿಸಿಕೊಳ್ಳಬೇಕಿದೆ. ಈ ಅರಣ್ಯ ಭೂಮಿಯನ್ನು ಕಾಲೇಜು, ಕಾರ್ಪೊರೇಟರ್ ಗಳು, ರಿಯಲ್ ಎಸ್ಟೇಟ್ ವ್ಯಾಪಾರಿಗಳು, ನಿವೃತ್ತ ಡಿಎಸ್ ಪಿ, ಲ್ಯಾಂಡ್ ಡೆವೆಲಪರ್ಸ್ ಮತ್ತು ರಾಜಕೀಯ ನಾಯಕರು ಆಕ್ರಮಿಸಿಕೊಂಡಿದ್ದರು. ಪ್ರತಿಯೊಬ್ಬರೂ 10ರಿಂದ 20 ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದರು.

ಎಲ್ಲಾ ರಾಜಕೀಯ ಒತ್ತಡ ಮತ್ತು ಬೆದರಿಕೆಗಳನ್ನು ಎದುರಿಸಿ ಅರಣ್ಯ ಇಲಾಖೆ ಕಳೆದ ಆಗಸ್ಟ್ 17ರಂದು ಅರಣ್ಯ ಒತ್ತುವರಿ ತೆರವು ಮಾಡಲು ಆರಂಭಿಸಿದ್ದು ಇನ್ನೂ ಮುಂದುವರಿದಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಗೋಕುಲ್, ಡಿಸಿಎಫ್ ಆಂಟನಿ ಮರಿಯಪ್ಪ ಮತ್ತು ಎಸಿಎಫ್ ಜಿ ವೆಂಕಟೇಶ್ ಅವರ ಆದೇಶದ ಪ್ರಕಾರ ಒತ್ತುವರಿ ತೆರವು ನಡೆಯುತ್ತಿದೆ.

150 ಎಕರೆ ಬನ್ನೇರುಘಟ್ಟ ಅರಣ್ಯ ಪ್ರದೇಶ ಇನ್ನೂ ರೈತರ ಕೈಯಲ್ಲಿ:ಆನೇಕಲ್ ವಲಯದಲ್ಲಿ ಅರಣ್ಯ ಭೂಮಿ ಅತಿಕ್ರಮಣವನ್ನು ವಶಪಡಿಸಿಕೊಳ್ಳುವ ಮೊದಲು ಅರಣ್ಯಾಧಿಕಾರಿಗಳು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಕೃಷ್ಣ, ಕಗ್ಗಲಿಪುರ, ಬನ್ನೇರುಘಟ್ಟ ಮತ್ತು ಕೆ ಆರ್ ಪುರಂ ಮೂರು ವಲಯಗಳಲ್ಲಿ ಸುಮಾರು 100ರಿಂದ 150 ಕಾರ್ಮಿಕರು ಅತಿಕ್ರಮಣ ತೆರವುಗೊಳಿಸಲು ಬೂತನಹಳ್ಳಿಯಲ್ಲಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com