ಸರ್ಕಾರಿ ಆಸ್ಪತ್ರೆಯಲ್ಲಿನ ವೆಂಟಿಲೇಟರ್ ಕೊರತೆಯಿಂದಾಗಿ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವನ್ನಪ್ಪಿದರು: ಜೆಡಿಎಸ್ ನಾಯಕ 

ಸರ್ಕಾರಿ ಆಸ್ಪತ್ರೆಯಲ್ಲಿ ಎದುರಾಗಿದ್ದ ವೆಂಟಿಲೇಟರ್ ಕೊರತೆಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವನ್ನಪ್ಪಿದ್ದರು ಎಂದು ಜೆಡಿಎಸ್ ನಾಯಕ ವೈಎಸ್'ವಿ ದತ್ತ ಅವರು ಹೇಳಿದ್ದಾರೆ. 
ಅಪ್ಪಾಜಿ ಗೌಡ
ಅಪ್ಪಾಜಿ ಗೌಡ

ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ಎದುರಾಗಿದ್ದ ವೆಂಟಿಲೇಟರ್ ಕೊರತೆಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಾಜಿ ಶಾಸಕ ಅಪ್ಪಾಜಿ ಗೌಡ ಸಾವನ್ನಪ್ಪಿದ್ದರು ಎಂದು ಜೆಡಿಎಸ್ ನಾಯಕ ವೈಎಸ್'ವಿ ದತ್ತ ಅವರು ಹೇಳಿದ್ದಾರೆ. 

ಮಾಜಿ ಶಾಸಕ ಎಂ.ಜೆ ಅಪ್ಪಾಜಿಗೌಡರ ಸಾವು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಪಾಠವಾಗಬೇಕು. ಸಕಾಲಕ್ಕೆ ಅಪ್ಪಾಜಿಗೌಡ ಅವರಿಗೆ ಚಿಕಿತ್ಸೆ ದೊರೆಯದಿರುವುದರಿಂದಲೇ ಮೃತಪಟ್ಟಿದ್ದಾರೆ. ಬಹುಶಃ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೆಂಟಿಲೇಟರ್ ಹಾಗೂ ಚಿಕಿತ್ಸೆ ನೀಡಿದ್ದರೆ ಅವರು ಬದುಕುತ್ತಿದ್ದರು. ಆದರೆ, ಸಕಾಲಕ್ಕೆ ಚಿಕಿತ್ಸೆ ದೊರಕದೆ ಗೌಡರು ಮೃತಪಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಅಪ್ಪಾಜಿಗೌಡರಿಗೆ ಉಸಿರಾಟದ ತೊಂದರೆ ಕಂಡುಬಂದ ಕೂಡಲೇ ಅವರ ಸಂಬಂಧಿಕರು ಮತ್ತು ಗೆಳೆಯರು ಇಡೀ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗಳಿಗೆಲ್ಲ ಸುತ್ತಾಡಿಕೊಂಡು ಬಂದರಾದರೂ ಸ್ಪಂದನೆ ದೊರಕಲಿಲ್ಲ ಎಂಬ ದೂರು ಕೇಳಿಬಂದಿದೆ. ಅಲ್ಲದೆ, ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಚಿಕಿತ್ಸೆ ನೀಡಲಿಲ್ಲ. ಕೊನೆಗೆ ಮೆಗ್ಗಾನ್ ಆಸ್ಪತ್ರೆಗೆ ಬಂದರೂ ಕೂಡ ಅಲ್ಲಿಯೂ ವೆಂಟಿಲೇಟರ್ ದೊರಕಲಿಲ್ಲ. ಈ ಕಾರಣಕ್ಕಾಗಿಯೇ ಅಪ್ಪಾಜಿಗೌಡರು ಮೃತಪಡುವಂತಾಯಿತು. ಹೀಗಾಗಿ ಅಪ್ಪಾಜಿಗೌಡರ ಸಾವಿಗೆ ಜಿಲ್ಲಾಡಳಿತವೇ ಹೊಣೆ ಹೊರಬೇಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com