ಸುಶಾಂತ್ ಸಾವು ಪ್ರಕರಣ: ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್ ಕಾರ್ಪೋರೇಟರ್ ಪುತ್ರನಿಗೆ ಎನ್‍ಸಿಬಿ ನೋಟಿಸ್!
ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಕಾರ್ಪೋರೇಟರ್ ಕೇಶವಮೂರ್ತಿ ಮಗ ಯಶಸ್ ಹೆಸರು ಕೇಳಿಬಂದಿತ್ತು. ಯಶಸ್ ಗೆ ಡ್ರಗ್ಸ್ ಪೆಡ್ಲರ್ ಜತೆ ನಂಟಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಎನ್‍ಸಿಬಿ ಅಧಿಕಾರಿಗಳು ಯಶಸ್ ಗೆ ನೋಟಿಸ್ ನೀಡಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕಾಂಗ್ರೆಸ್ ಕಾರ್ಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್ ಗೆ ಮುಂಬೈ ಡ್ರಗ್ಸ್ ಜಾಲದ ನಂಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಎನ್ ಸಿಬಿ ಅಧಿಕಾರಿಗಳ ತಂಡ ಕಾರ್ಪೋರೇಟರ್ ಕೇಶವಮೂರ್ತಿ ಮನೆ ಮೇಲೆ ದಾಳಿ ನಡೆಸಿ ಪುತ್ರ ಯಶಸ್ ಗೆ ನೋಟಿಸ್ ನೀಡಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಂಬಂಧ ಡ್ರಗ್ಸ್ ಮಾಫಿಯಾ ನಂಟಿದೆ ಎಂಬುದು ಪತ್ತೆಯಾದ ನಂತರ ನಾರ್ಕೋಟಿಕ್ಸ್ ಕಂಟ್ರೋಲರ್ ಬ್ಯೂರೋ(ಎನ್ಸಿಬಿ) ಅಖಾಡಕ್ಕೆ ಇಳಿದಿತ್ತು.
ಮುಂಬೈನ ಡ್ರಗ್ ಪೆಡ್ಲರ್ ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ. ಮೊಹಮ್ಮದ್ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಮೊಹಮ್ಮದ್ ನ ವಿಚಾರಣೆ ವೇಳೆ ಯಶಸ್ ಹೆಸರು ಹೇಳಿರುವುದರಿಂದ ಎನ್ ಸಿಬಿ ಯಶಸ್ ಗೆ ನೋಟಿಸ್ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ