ಬಾಗಲಕೋಟೆ: ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ, ಸೋಂಕಿತ ರೋಗಿಗಳ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ

ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಸೂಕ್ತ ಸಂದರ್ಭದಲ್ಲಿ ಆಕ್ಸಿಜನ್ ದೊರೆಯದ ಕಾರಣದಿಂದ ಕೆಲವು ರೋಗಿಗಳನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದ ಘಟನೆ ಕಳೆದೆರಡು ದಿನದಿಂದ ನಡೆಯುತ್ತಿದೆ. ಅಲ್ಲದೆ ರೋಗಿಗಳ ಕುಟುಂಬಸ್ಥರು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆಗಳೂ ಕೂಡ ವರದಿಯ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಸೂಕ್ತ ಸಂದರ್ಭದಲ್ಲಿ ಆಕ್ಸಿಜನ್ ದೊರೆಯದ ಕಾರಣದಿಂದ ಕೆಲವು ರೋಗಿಗಳನ್ನು ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದ ಘಟನೆ ಕಳೆದೆರಡು ದಿನದಿಂದ ನಡೆಯುತ್ತಿದೆ. ಅಲ್ಲದೆ ರೋಗಿಗಳ ಕುಟುಂಬಸ್ಥರು ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆಗಳೂ ಕೂಡ ವರದಿಯಾಗಿವೆ. 

ಕೊರೋನಾ ಕಾರಣದಿಂದ ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಅವಕಾಶ ನೀಡಿದ್ದರಿಂದ ತೀವ್ರ ತರಹದ ಉಸಿರಾಟ ತೊಂದರೆ ಇರುವ ಹಾಗೂ ಕೋವಿಡ್ ಪಾಸಿಟಿವ್ ಇರುವ ರೋಗಿಗಳನ್ನು ದಾಖಲಿಸಿಕೊಂಡಿರುವ ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ಆಕ್ಸಿಜನ್ ಸರಬರಾಜು ಇಲ್ಲದೆ ಇರುವುದರಿಂದ ರೋಗಿಗಳಿಗೆ ಚಿಕಿತ್ಸೆ ಹೇಗೆ ನೀಡಬೇಕೆಂಬುದೇ ದೊಡ್ಡ ಪ್ರಶ್ನೆಯಾಗಿದೆ. 

ಬಳ್ಳಾರಿಯಲ್ಲಿರುವ ಆಕ್ಸಿಜನ್ ಪೂರೈಕೆ ಘಟಕದಲ್ಲಿ ತಾಂತ್ರಿಕ ಕಾರಣ ಉಂಟಾಗಿದ್ದರಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಆಗಬೇಕಾದ ಆಕ್ಸಿಜನ್ ವಿಳಂಬವಾಗಿ ತಲುಪುತ್ತಿರುವುದರಿಂದ ಅನಿವಾರ್ಯವಾಗಿ ತೀವ್ರ ತರಹದ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗುತ್ತಿದೆ. 

ಆಕ್ಸಿಜನ್ ಕೊರತೆಯನ್ನು ಒಪ್ಪಿಕೊಳ್ಳುವ ಡಿಹೆಚ್ಒ ಡಾ.ಅನಂತ ದೇಸಾಯಿ ಆಕ್ಸಿಜನ್ ಅಗತ್ಯವಿರುವ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿದ್ದೇವೆ. ಒಟ್ಟಾರೆ ಅಗತ್ಯವಾಗಿರುವ ಆಕ್ಸಿಜನ್ ಸಮಯಕ್ಕೆ ಸರಿಯಾಗಿ ತಲುಪಿ ರೋಗಿಗಳಿಗೆ ನೆರವಾದರೆ ಅಷ್ಟೇ ಸಾಕು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com