ಇದೇ 16 ರಂದು ರಾಜ್ಯಸರ್ಕಾರದಿಂದ ವಿವಿಧ ಕಡೆಗಳಲ್ಲಿ ಸಾಲ ಮೇಳ, ಮೂರು ಲಕ್ಷದವರೆಗೂ ಯಾವುದೇ ಬಡ್ಡಿ ಇರಲ್ಲ

ಇದೇ ತಿಂಗಳ 16 ರಂದು ವಿವಿಧ ಕಡೆಗಳಲ್ಲಿ  ಸಾಲ ಮೇಳವನ್ನು  ರಾಜ್ಯ ಸರ್ಕಾರ ಆಯೋಜಿಸಿದೆ.ಇದರಿಂದಾಗಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣದ ನಂತರ ಉದ್ಯೋಗ ಕಳೆದುಕೊಂಡಂತಹವರು ಮತ್ತು ವ್ಯವಹಾರ ಮುಂದುವರೆಸಲು ಆಗದೇ ಸಂಕಷ್ಟ ಪಡುತ್ತಿರುವ ಸಾವಿರಾರು ಜನರಿಗೆ ನೆರವಾಗುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇದೇ ತಿಂಗಳ 16 ರಂದು ವಿವಿಧ ಕಡೆಗಳಲ್ಲಿ  ಸಾಲ ಮೇಳವನ್ನು  ರಾಜ್ಯ ಸರ್ಕಾರ ಆಯೋಜಿಸಿದೆ.ಇದರಿಂದಾಗಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಉಲ್ಬಣದ ನಂತರ ಉದ್ಯೋಗ ಕಳೆದುಕೊಂಡಂತಹವರು ಮತ್ತು ವ್ಯವಹಾರ ಮುಂದುವರೆಸಲು ಆಗದೇ ಸಂಕಷ್ಟ ಪಡುತ್ತಿರುವ ಸಾವಿರಾರು ಜನರಿಗೆ ನೆರವಾಗುವ ಸಾಧ್ಯತೆಯಿದೆ.

ಮೂರು ಲಕ್ಷದವರೆಗೂ ಯಾವುದೇ ಬಡ್ಡಿ ಇರುವುದಿಲ್ಲ, ಮೂರು ಲಕ್ಷದಿಂದ 10 ಲಕ್ಷದವರೆಗಿನ ಸಾಲಕ್ಕೆ ಶೇ. 3 ರಷ್ಟು ಬಡ್ಡಿ ವಿಧಿಸಲಾಗುತ್ತದೆ.ಈ ಹಣವನ್ನು ರಾಜ್ಯ ಸರ್ಕಾರದ ಜೊತೆಗೆ ಆತ್ಮನಿರ್ಭಾರ ಭಾರತ್ ನಿಧಿಯಿಂದ ಬಿಡುಗಡೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಕಾರ್ಯಕ್ರಮ ಉದ್ಘಾಟಿಸುವ ಸಾಧ್ಯತೆಯಿದೆ.

ಮಾರ್ಚ್ ನಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ತೆರೆವಾಗಿದ್ದರೂ ಕೂಡಾ ಬೀದಿ ವ್ಯಾಪಾರಿಗಳು, ಕಾರ್ಮಿಕರು, ಮಹಿಳಾ ಸಹಾಯ ಗುಂಪುಗಳು, ಕೃಷಿ ಕಾರ್ಮಿಕರು,ಡೈರಿ ಮತ್ತು ರೇಷ್ಮೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದು, ಅಂತವರಿಗಾಗಿ ಬೆಂಗಳೂರು,ಮೈಸೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಸಾಲ ಮೇಳ ಆಯೋಜಿಸಲಾಗುತ್ತಿದೆ. ವಿವಿಧ ಸಹಕಾರ ಬ್ಯಾಂಕ್ ಗಳು ಈ ಸಾಲದ ಹಣವನ್ನು ವಿತರಿಸುವ ಸಾಧ್ಯತೆಯಿದೆ.

ಕೋವಿಡ್ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜನರನ್ನು ಮೇಲೆತ್ತಲು ಇದೊಂದು ತಾತ್ಕಾಲಿಕ ಯೋಜನೆಯಾಗಿದೆ ಎಂದು ಸಹಕಾರ ಇಲಾಖೆಯ ಅಧಿಕೃತ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿವೆ.

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಬೀದಿ ವ್ಯಾಪಾರಿಗಳಿಗಾಗಿ ಆರಂಭಿಸಲಾಗಿದ್ದ ಇದೇ ರೀತಿಯ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ವ್ಯವಸ್ಥೆಗೆ  ಈ ವರ್ಷದ ಬಜೆಟ್ ನಲ್ಲಿ ಯುಡಿಯೂರಪ್ಪ ಯಾವುದೇ ರೀತಿ ಹಣ ಹಂಚಿಕೆ ಮಾಡದಿದ್ದರೂ, ಈ  ಹೊಸ ಯೋಜನೆ ಮೂಲಕ ಬೀದಿ ವ್ಯಾಪಾರಗಳಿಗೆ ಸಾಲ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com