ಬೆಂಗಳೂರು: ಎಲೆಕ್ಟ್ರಿಕ್ ಮಸಾಜರ್ ಒಳಗೆ ಮಾದಕ ವಸ್ತುಗಳನ್ನಿಟ್ಟು ಸಾಗಿಸುತ್ತಿದ್ದ ಕೃತ್ಯವನ್ನು ಭೇದಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 1ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಲ್ಜಿಯಂನಿಂದ ಬಂದ ವಿಮಾನದಲ್ಲಿ ಎಲೆಕ್ಟ್ರಿಕ್ ಮಸಾಜರ್ ಒಂದು ಪಾರ್ಸೆಲ್ ಬಂದಿತ್ತು. ಇದರ ಒಳಗೆ 1,980 ಗ್ರಾಂ ಪ್ರಮಾಣದ ಎಂಡಿಎಂಎ ಮಾತ್ರೆಗಳು ಇರುವುದು ಪತ್ತೆಯಾಗಿದೆ.
ಅಂತಾರಾಷ್ಟ್ರೀಯ ಕೋರಿಯರ್ ಕೇಂದ್ರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ ಅನ್ನು ಪತ್ತೆ ಮಾಡಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆ ಇದರಲ್ಲಿ ಸಿಕ್ಕಿದೆ.
Advertisement