ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬಿಡಿಎ ಪ್ರವೇಶ ದ್ವಾರಗಳಲ್ಲಿ ಕ್ಯಾಮರಾಗಳ ಅಳವಡಿಕೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವರ್ಚಸ್ಸಿಗೆ ಹಾನಿಯುಂಟುಮಾಡುತ್ತಿರುವ  ಮಧ್ಯವರ್ತಿಗಳ ಹಾವಳಿಯವನ್ನು ತಡೆಯುವ ನಿಟ್ಟಿನಲ್ಲಿ ಕುಮಾರಕೃಪ ಬಳಿಯ ಕೇಂದ್ರ ಕಚೇರಿಯ ಪ್ರವೇಶ ದ್ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ
ಪ್ರವೇಶದ್ವಾರಗಳಲ್ಲಿನ ಕ್ಯಾಮರಾಗಳು
ಪ್ರವೇಶದ್ವಾರಗಳಲ್ಲಿನ ಕ್ಯಾಮರಾಗಳು
Updated on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವರ್ಚಸ್ಸಿಗೆ ಹಾನಿಯುಂಟುಮಾಡುತ್ತಿರುವ  ಮಧ್ಯವರ್ತಿಗಳ ಹಾವಳಿಯವನ್ನು ತಡೆಯುವ ನಿಟ್ಟಿನಲ್ಲಿ ಕುಮಾರಕೃಪ ಬಳಿಯ ಕೇಂದ್ರ ಕಚೇರಿಯ ಪ್ರವೇಶ ದ್ವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಹಿಂದೆ ಇದ್ದಂತೆ ಎಲ್ಲಾರೂ ಮುಕ್ತವಾಗಿ ಪ್ರವೇಶಿಸುವಂತಿಲ್ಲ, ಪ್ರತಿಯೊಬ್ಬ ವ್ಯಕ್ತಿಯು ಸಂಪರ್ಕ ವಿವರಗಳೊಂದಿಗೆ ತಮ್ಮ ಪ್ರವೇಶವನ್ನು ದಾಖಲು ಮಾಡುವ ಅಗತ್ಯವಿದೆ ಎಂದು ಬಿಡಿಎ ಕಾರ್ಯಪಡೆ , ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಗುನಾರೆ ತಿಳಿಸಿದ್ದಾರೆ. 

ಬಿಡಿಎ ಆವರಣದೊಳಗೆ ಈಗಾಗಲೇ ಇರುವ 43 ಕ್ಯಾಮರಾದೊಂದಿಗೆ ಮತ್ತೆ ಮೂರನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಪೊಲೀಸರ ಕಾರ್ಯಾಚರಣೆ ಮೇಲೆ ನಿಗಾ ವಹಿಸಲು ಈ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುವುದು. ನಿರಂತರವಾಗಿ ಸಂದರ್ಶಕರ ಮೇಲೆ ನಿಗಾ ಇಡಲು ಕಾರ್ಯ ಪಡೆ ಮತ್ತು ಕಮೀಷನರ್ ಕಚೇರಿಯಲ್ಲಿ ಪ್ರತ್ಯೇಕವಾದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಪರಾಹ್ನ 3 ಗಂಟೆಯವರೆಗೂ ಸಂದರ್ಶಕರು ಮುಖ್ಯ ಕಚೇರಿಗೆ ಬರುವಂತಿಲ್ಲ. ನೌಕರರನ್ನು ಹೊರತುಪಡಿಸಿದಂತೆ ಕೇವಲ ಪತ್ರಕರ್ತರ ಗುರುತನ್ನು ಮಾತ್ರ ಪರಿಶೀಲಿಸಲಾಗುವುದು, ಆರ್ಕಾವತಿ, ಮತ್ತು ಕೆಂಪೇಗೌಡ ಲೇಔಟ್ ನ ರೈತರಿಗೆ ವಿಶೇಷವಾದ ಗುರುತಿನ ಕಾರ್ಡ್ ಗಳನ್ನು ನೀಡಲಾಗಿದ್ದು, ಅವರಿಗೆ ಪ್ರವೇಶ ನೀಡಲಾಗುವುದು ಎಂದು ಗುನಾರೆ ತಿಳಿಸಿದರು.

ಬಿಡಿಎಯಲ್ಲಿ ವೃತ್ತಿಪರತೆಯನ್ನು ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಆಯುಕ್ತ ಹೆಚ್. ಆರ್. ಮಹಾದೇವ್ ಹೇಳಿದ್ದಾರೆ. ಕ್ಯಾಮರಾ ಅಳವಡಿಕೆಯಿಂದ ನೌಕರರ ಕೆಲಸದ ಕಡೆಗೆ ಗಮನ ಹರಿಸಲು ನೆರವಾಗಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಾಡುಬೀಸನಹಳ್ಳಿಯಲ್ಲಿ 15 ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯದ ಐದು ನಿವೇಶನಗಳ ಅಕ್ರಮ ಮಾರಾಟದ ಹಿನ್ನೆಲೆಯಲ್ಲಿ  ನಾಲ್ವರು ಸಿಬ್ಬಂದಿ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಬಿಡಿಎ ಸೋಮವಾರ ಎಫ್ ಐಆರ್ ದಾಖಲಿಸಿದೆ. ವ್ಯವಹಾರದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆಯಲ್ಲಿ ಆರೋಪಿಗಳು ಹೇಳಿದ ನಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com