ಎಸ್‌ಸಿ /ಎಸ್‌ಟಿ ಪ್ರಕರಣಗಳ ತನಿಖೆ, ವಿಚಾರಣೆಯಲ್ಲಿ ವಿಳಂಬ: ಪರಿಣಾಮಕಾರಿ ಅನುಷ್ಠಾನಕ್ಕೆ ಹೈಕೋರ್ಟ್ ನಿರ್ದೇಶನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989 ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆ, ವಿಚಾರಣೆಯಲ್ಲಿ ವಿಳಂಬ ಮತ್ತು ಕಡಿಮೆ ಅಪರಾಧ ಸಾಬೀತಾಗಿರುವುದನ್ನು  ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು, ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಅನೇಕ ನಿರ್ದೇಶನಗಳನ್ನು ನೀಡಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989 ರ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆ, ವಿಚಾರಣೆಯಲ್ಲಿ ವಿಳಂಬ ಮತ್ತು ಕಡಿಮೆ ಅಪರಾಧ ಸಾಬೀತಾಗಿರುವುದನ್ನು  ಹೈಕೋರ್ಟ್ ಗಂಭೀರವಾಗಿ ತೆಗೆದುಕೊಂಡಿದ್ದು, ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಅನೇಕ ನಿರ್ದೇಶನಗಳನ್ನು ನೀಡಿದೆ.

ರಾಜ್ಯ ಪರಿಶಿಷ್ಟ ಜಾತಿ  ಮತ್ತು ಪಂಗಡ ಬಲವರ್ದನೆ ಮತ್ತು ಮೇಲ್ವಿಚಾರಣಾ ಸಮಿತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಆಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಒಕಾ ಮತ್ತು ನ್ಯಾಯಾಧೀಶ ಅಶೋಕ್ ಎಸ್ ಕಿನಾಗಿ ಅವರನ್ನೊಳಗೊಂಡ ವಿಭಾಗೀಯ ಪೀಠ, ನಿರ್ದೇಶನಗಳನ್ನು ನೀಡಿತು.

ನಿಯಮ 7(2) ರ ಪ್ರಕಾರ 60 ದಿನಗಳೊಳಗೆ ಚಾರ್ಚ್ ಶೀಟ್ ಸಲ್ಲಿಸಬೇಕು. ಆದಾಗ್ಯೂ, 2015ರಲ್ಲಿ ಅಂತ್ಯದಲ್ಲಿ ದಾಖಲಾಗಿರುವ 35, 091 ಪ್ರಕರಣಗಳಲ್ಲಿ ಕೇವಲ 6, 451 ಪ್ರಕರಣಗಳಿಗೆ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ತನಿಖೆಯ ವಿಳಂಬಕ್ಕೆ ತನಿಖಾ ಅಧಿಕಾರಿ ವಿವರಣೆಯನ್ನು ಸಲ್ಲಿಸಿದ್ದಾರೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

ಬಾಕಿ ಇರುವ ಹೆಚ್ಚಿನ ಸಂಖ್ಯೆಯ  ಪ್ರಕರಣಗಳು ಮತ್ತು  ಜಿಲ್ಲಾ ನ್ಯಾಯಾಧೀಶರನ್ನು ಭರ್ತಿ ಮಾಡಲು ಕೈಗೊಂಡ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಕಾಯಿದೆಯಡಿ ಪ್ರಕರಣಗಳನ್ನು ವಿಚಾರಣೆ ನಡೆಸಲು ಇನ್ನೂ ಒಂಬತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯ ಸರ್ಕಾರದ ಮನವಿಯ ಕುರಿತು ವರದಿ ಸಲ್ಲಿಸುವಂತೆ  ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಗೆ ನ್ಯಾಯಪೀಠ ನಿರ್ದೇಶನ ನೀಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com