ವಿಧಾನಸೌಧ
ರಾಜ್ಯ
ಡ್ರಗ್ಸ್ ತಡೆಗೆ ಕಠಿಣ ಕಾನೂನು ಜಾರಿಗೆ ಮುಂದಾದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಡ್ರಗ್ಸ್ ಕಾನೂನು ಬಲಪಡಿಸಲು ಉದ್ದೇಶಿಸಿರುವ ಸರ್ಕಾರ, ಡ್ರಗ್ಸ್ ಪ್ರಚೋದಕರನ್ನೂ ಕಾನೂನಿನ ವ್ಯಾಪ್ತಿಯೊಳಗೆ ತಂದು ಶಿಕ್ಷೆ ವಿಧಿಸಲು ತೀರ್ಮಾನಿಸಿದೆ. ಈ ಸಂಬಂಧದ ಕಾಯ್ದೆಗಳ ರಚನೆಗೆ ರಾಷ್ಟ್ರೀಯ ಕಾನೂನು ಶಾಲೆ ಮೊರೆಹೋಗಿದೆ.
ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಕಾನೂನು ಬಲಪಡಿಸಲು ಉದ್ದೇಶಿಸಿರುವ ಸರ್ಕಾರ, ಡ್ರಗ್ಸ್ ಪ್ರಚೋದಕರನ್ನೂ ಕಾನೂನಿನ ವ್ಯಾಪ್ತಿಯೊಳಗೆ ತಂದು ಶಿಕ್ಷೆ ವಿಧಿಸಲು ತೀರ್ಮಾನಿಸಿದೆ. ಈ ಸಂಬಂಧದ ಕಾಯ್ದೆಗಳ ರಚನೆಗೆ ರಾಷ್ಟ್ರೀಯ ಕಾನೂನು ಶಾಲೆ ಮೊರೆಹೋಗಿದೆ.
‘ಮಾದಕ ವಸ್ತುಗಳ ದಂಧೆಯಲ್ಲಿ ಸಕ್ರಿಯವಾಗಿರುವವರ ವಿರುದ್ಧ ಕಠಿಣ ಕಾನೂನಿನ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಸರ್ಕಾರದ ಅಡ್ವೋಕೇಟ್ ಜನರಲ್ ಜತೆ ಚರ್ಚಿಸಲಾಗಿದೆ.
ಬಲಿಷ್ಠ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕರಡು ಸಲ್ಲಿಕೆಯಾದ ತಕ್ಷಣ ಸರ್ಕಾರ ಅದನ್ನು ಪರಿಶೀಲಿಸಿ, ಜಾರಿಗೆ ತರಲಿದೆ. ಮುಂದಿನ ದಿನಗಳಲ್ಲಿ ಡ್ರಗ್ಸ್ ಪ್ರಚೋದಕರನ್ನೂ ಇದರ ವ್ಯಾಪ್ತಿಗೆ ಒಳಪಡಿಸಲು ಉದ್ದೇಶಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ