ಭಾರತೀಯ ಲಾಂಛನದ ಕಾನೂನು ಬಾಹಿರ ಬಳಕೆ: ಎನ್ ಜಿ ಒ ವಿರುದ್ಧ ಕ್ರಮ

ಭಾರತ ದೇಶದ ಲಾಂಛನ ಇರುವ ಲ್ಯಾಪ್ ಟಾಪ್ ಬೇಕಾದರೇ 3,500 ರು, ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಎನ್ ಜಿ ಒ ವಿರುದ್ದ ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ದೂರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತ ದೇಶದ ಲಾಂಛನ ಇರುವ ಲ್ಯಾಪ್ ಟಾಪ್ ಬೇಕಾದರೇ 3,500 ರು, ನೀಡುವಂತೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಎನ್ ಜಿ ಒ ವಿರುದ್ದ ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ದೂರಿದ್ದಾರೆ.

ನಂದಿ ಚಾರಿಟಿ ಫೌಂಡೇಶನ್ ಎಂಬ ಎನ್ ಜಿ ಸಂಸ್ಥೆ ಸಾಮಾಜಿಕ ಮಾಧ್ಯಮದಲ್ಲಿ  ವಿದ್ಯಾರ್ಥಿಗೆ 3,500 ರು. ನೀಡುವಂತೆ ಕೇಳಿದೆ, ಬದಲಾಗಿ ಭಾರತೀಯ ರಾಷ್ಟ್ರೀಯ ಲಾಂಛನ ಇರುವ ಲ್ಯಾಪ್ ಟಾಪ್ ನೀಡುವುದೆಂದು ತಿಳಿಸಿದೆ.

ಈ ಪೋಸ್ಟ್ ನೋಡಿದ ವ್ಯಕ್ತಿಯೊಬ್ಬರು ರಿಜಿಸ್ಟಾರ್ ಆಫ್ ಕಂಪನೀಸ್ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸಂಸ್ಥೆ ಮತ್ತು ಅದರ ಚಟುವಟಿಕೆಗಳಿಗೆ ಸಚಿವಾಲಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ರಿಜಿಸ್ಟ್ರಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಾಂಛನವನ್ನು ನೋಡಿ ಮತ್ತು ಅದು ಅಧಿಕೃತವೆಂದು ಭಾವಿಸಿ ಹೋಗಿ ಹಣವನ್ನು ಪಾವತಿಸಿದ ಜನರಿದ್ದಾರೆ ಎಂದು ಸುಮಿತ್ ಬೇಕಲ್ ಎಂಬುವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com