ಬೆಂಗಳೂರಿನಲ್ಲಿ ಸಾಕಷ್ಟು ವೆಂಟಿಲೇಟರ್ ಗಳಿವೆ, ಆದರೆ ಬೆಲೆ ಹೆಚ್ಚು!

ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿಯ ನಡುವೆ ವೆಂಟಿಲೇಟರ್ ಗಳ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಸಹ ಜನರಿಗೆ ಅದರಿಂದ ಉಪಯೋಗವಾಗುತ್ತಿಲ್ಲ. 
ಬೆಂಗಳೂರಿನಲ್ಲಿ ಸಾಕಷ್ಟು ವೆಂಟಿಲೇಟರ್ ಗಳಿವೆ, ಆದರೆ ಬೆಲೆ ಹೆಚ್ಚು!
ಬೆಂಗಳೂರಿನಲ್ಲಿ ಸಾಕಷ್ಟು ವೆಂಟಿಲೇಟರ್ ಗಳಿವೆ, ಆದರೆ ಬೆಲೆ ಹೆಚ್ಚು!

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್-19 ಪರಿಸ್ಥಿತಿಯ ನಡುವೆ ವೆಂಟಿಲೇಟರ್ ಗಳ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಸಹ ಜನರಿಗೆ ಅದರಿಂದ ಉಪಯೋಗವಾಗುತ್ತಿಲ್ಲ. 

ತಜ್ಞರ ಪ್ರಕಾರ ಸಾಕಷ್ಟು ವೆಂಟಿಲೇಟರ್ ಗಳಿವೆ, ಆದರೂ ಸಹ ಜನತೆಗೆ ವೆಂಟಿಲೇಟರ್ ಬೆಡ್ ದೊರೆಯುವುದು ಕಷ್ಟಸಾಧ್ಯವಾಗಿದೆ.  ಅಸಮರ್ಪಕ ವಿತರಣೆಯೇ ಇದಕ್ಕೆ ಕಾರಣವಾಗಿದೆ. 

ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಹಲವು ವೆಂಟಿಲೇಟರ್ ಬೆಡ್ ಗಳಿವೆ. ಆದರೆ ಇದು ಅತ್ಯಂತ ದುಬಾರಿಯಾಗಿದ್ದು, ಸಾಮಾನ್ಯ ಜನತೆಗೆ ಕೈಗೆಟುಕುವ ದರದಲ್ಲಿ ಲಭ್ಯವಿಲ್ಲ. 

ಕೈಗೆಟುಕುವ ದರದಲ್ಲಿ ಲಭ್ಯತೆಯ ಕೊರತೆ ಒಂದೆಡೆಯಾದರೆ, ನಿಭಾಯಿಸಬಲ್ಲ ದರ ಇರುವ ಸಣ್ಣ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಲಭ್ಯತೆಯನ್ನೂ ಮೀರಿ ರೋಗಿಗಳು ಬರುತ್ತಿರುವುದರಿಂದ ಅಸಮತೋಲನ ಉಂಟಾಗಿದೆ ಎನ್ನುತ್ತಾರೆ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಸಂಜೀವ್ ಲೆವಿನ್  
 
ಉದಾಹರಣೆಗೆ ಸೇಂಟ್ ಜಾನ್ಸ್ ನಲ್ಲಿ ಎಲ್ಲಾ ಐಸಿಯು ವೆಂಟಿಲೇಟರ್ ಬೆಡ್ ಗಳೂ ಭರ್ತಿಯಾಗಿವೆ. 40 ಜನರು ಕೋವಿಡ್-19 ಯೇತರ ರೋಗಿಗಳಾಗಿದ್ದರೆ, 53 ಜನರು ಕೋವಿಡ್ ರೋಗಿಗಳಿದ್ದಾರೆ. ಕಳೆದ 8 ತಿಂಗಳಲ್ಲಿ ರೋಗಿಗಳನ್ನು ಸರ್ಕಾರಿ ನಿಯಂತ್ರಿತ ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಯತ್ನಿಸಲಾಗಿದೆಯಾದರೂ ವೆಂಟಿಲೇಟರ್  ಬೆಡ್ ಕಳ ಕೊರತೆ ಎದುರಾಗಿದೆ. ಅಲ್ಲಿಯೂ ವೆಂಟಿಲೇಟರ್ ಬೆಡ್ ಗಳು ಭರ್ತಿಯಾಗಿದೆ. ಉಪಕರಣಗಳ ಕೊರತೆಯ ಜೊತೆಗೆ ಕ್ರಿಟಿಕಲ್ ಕೇರ್ ತಂಡದ ಕೊರತೆಯೂ ಕಾಡುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. 

ಬೆಂಗಳೂರಿನ ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ 50-200 ಐಸಿಯು ವೆಂಟಿಲೇಟರ್ ಬೆಡ್ ಗಳು ಇವೆ. ಈ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್ ಗಳ ಲಭ್ಯತೆ ಧಾರಾಳವಾಗಿದೆ. ಆದರೆ ಸಾಮಾನ್ಯ ಜನತೆಗೆ ಇಲ್ಲಿನ ವೆಚ್ಚ ನಿಭಾಯಿಸುವ ಶಕ್ತಿ ಇರುವುದಿಲ್ಲ. ಸರ್ಕಾರಿ ಕೋಟಾದ ಅಡಿ ಯಾವುದೇ ಕೋವಿಡ್-19 ರೋಗಿ ಬಾರದೇ ಇದ್ದರೆ ದಿನವೊಂದಕ್ಕೆ ಇಂತಹ ಆಸ್ಪತ್ರೆಗಳಲ್ಲಿ ಐಸಿಯು ವೆಂಟಿಲೇಟರ್ ಬೆಡ್ ಗೆ 1. ರಿಂದ 1.5 ಲಕ್ಷ ರೂಪಾಯಿ ಖರ್ಚಾಗಲಿದೆ. ಆದರೆ ಸರ್ಕಾರಿ ಅಥವಾ ಸಣ್ಣ ಆಸ್ಪತ್ರೆಗಳಲ್ಲಿ 20,000-25,000 ರೂಪಾಯಿಗಳಾಗಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ನೀತಿ ನಿರ್ಧಾರಗಳ ಕಾರಣದಿಂದಾಗಿ ಸರ್ಕಾರಿ ಅಥವಾ ಸಣ್ಣ ಆಸ್ಪತ್ರೆಗಳು ಕಾರ್ಪೊರೇಟ್ ಆಸ್ಪತ್ರೆಗಳ ಗುಣಮಟ್ಟ ಸಾಧಿಸಲು ಸಾಧ್ಯವಾಗುತ್ತಿಲ್ಲ ಸಣ್ಣ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ವೆಂಟಿಲೇಟರ್ ಗಳಿಗೆ ಸಂಬಂಧಿಸಿದಂತೆ ಹೂಡಿಕೆ ಮಾಡಬೇಕಿತ್ತು. ದೊಡ್ಡ ಆಸ್ಪತ್ರೆಗಳಲ್ಲಿ ವೆಚ್ಚ ನಿಯಂತ್ರಣ ಪಾಲನೆ ಮಾಡಲಾಗುತ್ತಿಲ್ಲ. ಸರ್ಕಾರ ಅವುಗಳನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com