ಪ್ರವಾಹ ಪೀಡಿತ ಉಡುಪಿ ಜಿಲ್ಲೆ ಗ್ರಾಹಕರಿಗೆ ನೆರವು ನೀಡಲು ಮುಂದಾದ ಹ್ಯುಂಡೈ ಕಂಪನಿ

ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಗ್ರಾಹಕರಿಗೆ ಪರಿಹಾರ ನೀಡಲು ಹ್ಯುಂಡೈ ಕಂಪನಿ ಮುಂದಾಗಿದ್ದು ಈ ಸಂಬಂಧ ಕಾರ್ಯಪಡೆ ರಚಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಗ್ರಾಹಕರಿಗೆ ಪರಿಹಾರ ನೀಡಲು ಹ್ಯುಂಡೈ ಕಂಪನಿ ಮುಂದಾಗಿದ್ದು ಈ ಸಂಬಂಧ ಕಾರ್ಯಪಡೆ ರಚಿಸಿದೆ.

ರಾಜ್ಯದ ಪ್ರವಾಹ ಪೀಡಿತ ಉಡುಪಿ ಜಿಲ್ಲೆಯ ಹ್ಯುಂಡೈ ಗ್ರಾಹಕರಿಗೆ ನೆರವು ನೀಡಲು ಮುಂದಾಗಿದೆ. ಕಂಪನಿಯು ಪ್ರವಾಹ ಪೀಡಿತ ಪ್ರದೇಶಗಳ ವಾಹನಗಳ ವಿಮೆ ಮೇಲೆ ಡಿಪ್ರಿಯಿಸಿಯೇಷನ್ ಮೊತ್ತದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ. 

ಈ ಪ್ರತಿಕೂಲ ಸಮಯದಲ್ಲಿ ನಾವು ಉಡುಪಿಯಲ್ಲಿ ಪ್ರವಾಹ ಪೀಡಿತ ಗ್ರಾಹಕರಿಗೆ ನಮ್ಮ ಸೇವಾ ಬೆಂಬಲವನ್ನು ಹೆಚ್ಚಿಸಿದ್ದೇವೆ. ಉಡುಪಿ ಜನರ ಜೊತೆ ನಾವು ಅವರ ಸಹಾಯಕ್ಕೆ ನಿಂತಿದ್ದೇವೆ, ಪ್ರವಾಹದಿಂದ ಹಾನಿಗೊಳಗಾಗಿರುವ ಅವರ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ನಾವು ಜೊತೆಯಾಗಿ ನಿಲ್ಲುತ್ತೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ನಿರ್ದೇಶಕ ತರುಣ್ ಗರ್ಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com