ದೆಹಲಿ ನಿಜಾಮುದ್ದೀನ್​​ ಸಭೆಗೆ ಮಂಡ್ಯದಿಂದ ಹೋಗಿದ್ದು ಒಬ್ಬರೇ: ಮಂಡ್ಯ ಎಸ್ಪಿ

ಇಡೀ ದೇಶದ 18 ರಾಜ್ಯಗಳಿಗೆ ಕೊರೋನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿರುವ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಾಗಮಂಗಲ ತಾಲ್ಲೂಕಿನ ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ. 
ನಿಜಾಮುದ್ದೀನ್ ಮಸೀದಿ ಪ್ರಕರಣ
ನಿಜಾಮುದ್ದೀನ್ ಮಸೀದಿ ಪ್ರಕರಣ

ಮಂಡ್ಯ: ಇಡೀ ದೇಶದ 18 ರಾಜ್ಯಗಳಿಗೆ ಕೊರೋನಾ ವೈರಸ್ ಹರಡಿರುವ ಶಂಕೆ ವ್ಯಕ್ತವಾಗಿರುವ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಾಗಮಂಗಲ ತಾಲ್ಲೂಕಿನ ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ. 

ನಾಗಮಂಗಲದ ನೂರುಲ್ಲಾ ಎಂಬ ವ್ಯಕ್ತಿ ಬಿಟ್ಟರೆ ಮಂಡ್ಯದಿಂದ ಯಾರೂ ಕೂಡ ನಿಜಾಮುದ್ದೀನ್​ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವ ಮಾಹಿತಿ ಇಲ್ಲ. ಸರ್ಕಾರ ಕೊಟ್ಟಿರುವ ಪಟ್ಟಿಯಲ್ಲಿ ಮಂಡ್ಯದ 8 ಜನರು ಇದ್ದಾರೆ. ನಾವು ಪರಿಶೀಲನೆ ಮಾಡಿದ್ದೇವೆ. ವಿಳಾಸ ಮಂಡ್ಯದ್ದಿದೆ. ಆದರೆ ಅವರೆಲ್ಲಾ  ಬೇರೆ ಕಡೆ ವಾಸವಿದ್ದಾರೆ. ಒಬ್ಬರ ಫೋನ್ ಮಾರ್ಚ್ 24ರಿಂದ ಸ್ವಿಚ್ ಆಫ್ ಆಗಿದೆ. ಕೊನೆಯ ಲೊಕೇಶನ್ ಉತ್ತರಪ್ರದೇಶದಲ್ಲಿ ತೋರಿಸುತ್ತಿದೆ ಎಂದರು. 

ಜಿಲ್ಲೆಯಲ್ಲಿ ಗುಜರಾತಿನ ಧಾರ್ಮಿಕ ಬೋಧನೆ ಮಾಡುವ ವ್ಯಕ್ತಿಗಳು ಬೇರೆ ಬೇರೆ ಮಸೀದಿಗಳಲ್ಲಿದ್ದಾರೆ. ಅವರು ಪ್ರಸ್ತುತ 25 ದಿನಗಳನ್ನು ಕಳೆದಿದ್ದಾರೆ. ಅವರಿಗೆ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಆದ್ರೂ ಅವರನ್ನ  ಹೋಂ ಕ್ವಾರಂಟೈನ್​​ನಲ್ಲಿ ಇಡಲಾಗಿದೆ ಎಂದರು.24 ಜನ ಬೇರೆ ಜಿಲ್ಲೆಯ ವ್ಯಕ್ತಿಗಳು ನಮ್ಮಲ್ಲಿ ಇದ್ದಾರೆ. ಅವರನ್ನೂ ಕೂಡ ತಪಾಸಣೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ. ಅವರನ್ನು ಕೂಡ ಹೋಂ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ ಎಂದರು

- ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com