ಪ್ರತಿ ಹೆಕ್ಟೇರಿಗೆ 50 ಸಾವಿರ ಪರಿಹಾರ ಕೊಡಬೇಕು: ಮಾಜಿ ಸಚಿವ ಶಿವರಾಜ‌ ತಂಗಡಗಿ ಆಗ್ರಹ

ಆಲಿಕಲ್ಲುಮಳೆ ಹಾಗೂ ಬಿರುಗಾಳಿಯಿಂದಾಗಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕಿನ ಅಪಾರ ಪ್ರಮಾಣದ ಭತ್ತ ನಾಶವಾಗಿದೆ. ಕೂಡಲೇ ಸರ್ಕಾರ ಹೆಕ್ಟೇರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ. 
ಮಾಜಿ ಸಚಿವ ಶಿವರಾಜ‌ ತಂಗಡಗಿ
ಮಾಜಿ ಸಚಿವ ಶಿವರಾಜ‌ ತಂಗಡಗಿ

ಗಂಗಾವತಿ: ಆಲಿಕಲ್ಲುಮಳೆ ಹಾಗೂ ಬಿರುಗಾಳಿಯಿಂದಾಗಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕಿನ ಅಪಾರ ಪ್ರಮಾಣದ ಭತ್ತ ನಾಶವಾಗಿದೆ. ಕೂಡಲೇ ಸರ್ಕಾರ ಹೆಕ್ಟೇರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಒತ್ತಾಯಿಸಿದ್ದಾರೆ. 

ನಗರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವಿಪತ್ತು ಎಂದು ಘೋಷಣೆ ಮಾಡಬೇಕು, ಅಲ್ಲದೇ 15 ದಿನದ ಗಡುವುದು ನೀಡುತ್ತಿದ್ದು, ಅಷ್ಟರೊಳಗೆ ಸರ್ಕಾರ ಪರಿಹಾರ ಧನ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಕೊರೊನಾದ ಎಚ್ಚರಿಕೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ನಿಷೇಧಾಜ್ಞೆಯನ್ನು ಮಿರಿಯೂ ರೈತರೊಂದಿಗೆ ಅವರ ಹಿತಕಾಪಾಡುವ ಉದ್ದೇಶಕ್ಕೆ ಕಾಂಗ್ರೆಸ ಪಕ್ಷದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಮೂರು ವರ್ಷದ ಹಿಂದೆ ಇದೇ ರೀತಿ ಆಲಿಕಲ್ಲುಮಳೆ ಸುರಿದಾಗ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿತ್ತು. ಆಗ ನಾನೇ ಖುದ್ದು ಮುಖ್ಯಮಂತ್ರಿಯಾಗಿದ್ದ ಸದ್ದರಾಮಯ್ಯ ಅವರನ್ನು ಒತ್ತಾಯಿಸಿ ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಲಾಗಿತ್ತು. ಆಗ ಹೆಕ್ಟೇರಿಗೆ ತಲಾ 25 ಸಾವಿರ ರೂಪಾಯ ಪರಿಹಾರ ಧನವನ್ನು ಎರಡು ವಾರದಲ್ಲಿ ಬಿಡುಗಡೆ ಮಾಡಿಸಲಾಗಿತ್ತು. ಈಗ ರಸಗೊಬ್ಬರ, ಕೃಷಿಕೂಲಿ ಹೆಚ್ಚಳ, ಬಿತ್ತನೆ ಬೀಜ ಪ್ರತಿಯೊಂದರ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ರೈತರು ಪ್ರತಿ ಎಕರೆಗೆ 40ರಿಂದ 45 ಸಾವಿರೂ ರೂಪಾಯಿ ಖಚರ್ು ಮಾಡಿದ್ದಾರೆ ಎಂದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com