ಲಾಕ್ ಡೌನ್ ಎಫೆಕ್ಟ್: ಸಂಪಾದನೆ ಇಲ್ಲ, ಕುದುರೆಗಳಿಗಾದರೂ ಆಹಾರ ನೀಡಿ; ಮೈಸೂರು ಟಾಂಗಾವಾಲಾಗಳ ಮನವಿ

ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇತ್ತ ಸಾಂಸ್ಕ್ರೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರಿಲ್ಲದೇ, ಕುದುರೆಗಳಿಗೆ ಮೇವಿಗೆ ಹಣವಿಲ್ಲದೇ ಟಾಂಗಾವಾಲಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಮೈಸೂರು ಟಾಂಗಾವಾಲಾ (ಚಿತ್ರಕೃಪೆ: ಮೈಸೂರುವೆಬ್)
ಮೈಸೂರು ಟಾಂಗಾವಾಲಾ (ಚಿತ್ರಕೃಪೆ: ಮೈಸೂರುವೆಬ್)

ಮೈಸೂರು: ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇತ್ತ ಸಾಂಸ್ಕ್ರೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರಿಲ್ಲದೇ, ಕುದುರೆಗಳಿಗೆ ಮೇವಿಗೆ ಹಣವಿಲ್ಲದೇ ಟಾಂಗಾವಾಲಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ಹೌದು.. ಬೇಸಿಗೆ ಬಂತೆದರೆ ಸಾಕು ಸಾಂಸ್ಕ್ರೃತಿಕ ನಗರಿ ಮೈಸೂರಿನ ಟಾಂಗಾವಾಲಾಗಳು ವಹಿವಾಟು ನಡೆಸುತ್ತಾರೆ. ಬೇಸಿಗೆ ರಜೆ ಹಿನ್ನಲೆಯಲ್ಲಿ ಮಕ್ಕಳು, ಪೋಷಕರು ಮಾತ್ರವಲ್ಲದೇ ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳು ಎಷ್ಟು ಖ್ಯಾತಿ ಪಡೆದಿದೆಯೇ ಅದೇ ರೀತಿ ಇಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಟಾಂಗಾಗಳೂ ಕೂಡ ಪ್ರವಾಸೋಧ್ಯಮದ ಆಕರ್ಷಣೆಯಲ್ಲಿ ಒಂದಾಗಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಟಾಂಗಾದಲ್ಲಿ ಕುಳಿತ ನಗರ ಪ್ರದಕ್ಷಿಣೆ ಮಾಡುತ್ತಾರೆ. ಇದೇ ಕಾರಣಕ್ಕೆ ಕಳೆದ 2 ತಿಂಗಳುಗಳಿಂದ ಮೈಸೂರಿನ ಟಾಂಗಾವಾಲಾಗಳು ಸಕಲ ಸಿದ್ಧತೆ ನಡೆಸಿದ್ದರು.

ಆದರೆ ಭಾರತದ ಮೇಲೆ ದಿಢೀರ್ ದಾಳಿ ಮಾಡಿದ ಮಾರಕ ಕೊರೋನಾ ವೈರಸ್ ಟಾಂಗಾವಾಲಾಗಳ ಜೀವನವೇ ಬುಡಮೇಲಾಗುವಂತೆ ಮಾಡಿದೆ. ಲಾಕ್ ಡೌನ್ ನಿಂದಾಗಿ ಇಡೀ ಮೈಸೂರು ಸ್ಥಬ್ದವಾಗಿದ್ದು, ಮೈಸೂರಿನಲ್ಲಿ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಾಕಷ್ಟು ವಲಯದ ಮಂದಿ ಬವಣೆ ಪಡುತ್ತಿದ್ದು, ಇದಕ್ಕೆ ಟಾಂಗಾವಾಲಾಗಳೂ ಕೂಡ ಹೊರತಾಗಿಲ್ಲ. ಮೈಸೂರಿನಲ್ಲಿ ಸುಮಾರು 250ಕ್ಕೂ ಹೆಚ್ಚು ಟಾಂಗಾವಾಲಾಗಳಿದ್ದು, ಅವರ ಜೀವನ ನಿರ್ವಹಣೆಗಾಗಿ ಅವರು ಟಾಂಗಾಗಳನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ನಿತ್ಯ ಸಾವಿರಾರು ಪ್ರವಾಸಿಗರನ್ನು ಕೂರಿಸಿಕೊಂಡು ನಗರ ಪ್ರದಕ್ಷಿಣೆ ಮಾಡುತ್ತಿದ್ದ ಟಾಂಗಾವಾಲಗಳು ನಿತ್ಯ 800 ರಿಂದ 1500 ಸಾವಿರ ರೂಗಳವರೆಗೂ ಸಂಪಾದಿಸುತ್ತಿದ್ದರು. ಆದರೆ ಇದೀಗ ಲಾಕ್ ಡೌನ್ ನಿಂದಾಗಿ ಕೆಲಸ ವಿಲ್ಲದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ತಮ್ಮ ಜೀವನ ಮಾತ್ರವಲ್ಲದೇ ಕನಿಷ್ಠ ಕುದುರೆಗಳ ಆಹಾರಕ್ಕೂ ಹಣವಿಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟಾಂಗಾವಾಲಾ ಅಹ್ಮದ್ ಸಿದ್ದಿಕಿ ಅವರು, ಲಾಕ್ ಡೌನ್ ನಿಂದಾಗಿ ನಮ್ಮ ನಿತ್ಯ ಜೀವನದ ಮೇಲೆ ಗಂಭೀರ ಪರಿಣಾಮ ಎದುರಾಗಿದೆ. ಸಂಪಾದನೆ ಇಲ್ಲದೇ ನಾವು ಮನೆಯಲ್ಲೇ ಕುಳಿತಿದ್ದೇವೆ. ಇದೀಗ ನಮ್ಮ ಕುಟುಂಬಗಳನ್ನೇ ನೋಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಕುದುರೆಗಳನ್ನೂ ನಿರ್ಪಹಣೆ ಮಾಡುವುದು ಕಷ್ಟ ಸಾಧ್ಯವಾಗುತ್ತಿದೆ. ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮ ಸರಿಯಾದುದ್ದೇ ಆದರೂ ನಮ್ಮ ಸಂಕಷ್ಟಗಳನ್ನೂ ಕೂಡ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ನಿತ್ಯ ಕುದುರೆಗಳ ನಿರ್ವಹಣೆಗೆ ಮತ್ತು ಮೇವಿಗಾಗಿ ಕನಿಷ್ಠ 150 ರಿಂದ 200 ರೂಗಳು ಬೇಕು. ಸರ್ಕಾರ ಕನಿಷ್ಠ ಈ ಹಣವನ್ನಾದರೂ ನಮಗೆ ನೀಡಿದರೆ ನಮಗೆ ದೊಡ್ಡ ಸಹಾಯ ಮಾಡಿದಂತೆ ಎಂದು ಹೇಳಿದ್ದಾರೆ.

ಅಂದಹಾಗೆ ಮೈಸೂರಿನಲ್ಲಿ 80 ಶಾ ಪಸಂದ್ ಮತ್ತು 20 ಸಾರೋಟುಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com