ಶಾಸಕ ಹರ್ಷವರ್ಧನ್ ಮತ್ತು  ಪ್ರತಾಪ್‌ ಸಿಂಹ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್‌ ಟಿ ಸೋಮಶೇಖರ್‌

ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ ವಿಚಾರದಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಭಿನ್ನಾಭಿಪ್ರಾಯ ಇಲ್ಲ. ಅಲ್ಲದೆ ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರ ತೀರ್ಮಾನವೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಎಸ್ ಟಿ ಸೋಮಶೇಖರ್
ಎಸ್ ಟಿ ಸೋಮಶೇಖರ್

ಮೈಸೂರು: ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ ವಿಚಾರದಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವೆ ಭಿನ್ನಾಭಿಪ್ರಾಯ ಇಲ್ಲ. ಅಲ್ಲದೆ ಈ ವಿಚಾರದಲ್ಲಿ ಜಿಲ್ಲಾಧಿಕಾರಿಯವರ ತೀರ್ಮಾನವೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ ವಿಚಾರದಲ್ಲಿ ಜಿಲ್ಲಾಧಿಕಾರಿ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಹರ್ಷವರ್ಧನ್ ನಡುವೆ ಮನಸ್ತಾಪವೂ ಇಲ್ಲ ಎಂದ ಎಸ್‌.ಟಿ. ಸೋಮಶೇಖರ್, ನಮಗೆ ಕಾರ್ಖಾನೆ ನೌಕರರ ಆರೋಗ್ಯವೇ ಮುಖ್ಯ ಎಂದರು. ನಾವು ಅದರ ಬಗ್ಗೆ ಮೊದಲು ಗಮನ ಹರಿಸಬೇಕಿದೆ ಎಂದಿದ್ದಾರೆ.

ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆಯ ಎಲ್ಲಾ ನೌಕರರು ಗುಣಮುಖ ಆಗುವವರೆಗೆ ಕಾರ್ಖಾನೆ ತೆರೆಯುವುದಿಲ್ಲ. ಈವರೆಗೆ ಕಾರ್ಖಾನೆಯ 1,500ಕ್ಕೂ ಹೆಚ್ಚು ನೌಕರರು ಹೋಂ ಕ್ವಾರಂಟೈನ್ ನಲ್ಲಿಯೇ ಇದ್ದಾರೆ. ಅವರೆಲ್ಲರೂ ಮೊದಲು ಗುಣಮುಖರಾಗಬೇಕು. ನಂತರ ಕಾರ್ಖಾನೆ ತೆರೆಯುವ ಬಗ್ಗೆ ತೀರ್ಮಾನ ಆಗುತ್ತದೆ. 

ಮೈಸೂರಿನಲ್ಲಿ ಕೋವಿಡ್19 ವಿಶೇಷ ಅಧಿಕಾರಿಯಾಗಿ ಹರ್ಷಗುಪ್ತ ನೇಮಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ಮೇಲೆ ಮತ್ತೊಬ್ಬ ಅಧಿಕಾರಿಯನ್ನು ನಾವು ನೇಮಕ ಮಾಡಿಲ್ಲ. ಇದು ಕೇವಲ ಮೈಸೂರಿನಲ್ಲಿ ಮಾತ್ರ ಆಗಿಲ್ಲ. ಬೆಂಗಳೂರು ಸೇರಿ ಎಲ್ಲ ಕಡೆ ನೇಮಿಸಲಾಗಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com