ಹುಬ್ಬಳ್ಳಿ: ಆರು ವರ್ಷದ ಬಾಲಕಿಯ 'ಯೋಗ'; ಎಲ್ಲಾ... ಪ್ರಧಾನಿ ಮೋದಿ ಮಹಿಮೆ!

ದೇಶದ ಪ್ರಜೆಗಳ ವಿಶಿಷ್ಟ ಕೆಲಸ, ಸಾಧನೆ, ಪ್ರತಿಭೆಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಆಗಾಗ ಬೆನ್ನುತಟ್ಟುವುದುಂಟು. ಸಾಧ್ಯವಾದುದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.
ಇಫ್ರಾ ಮುಲ್ಲಾ
ಇಫ್ರಾ ಮುಲ್ಲಾ

ಹುಬ್ಬಳ್ಳಿ: ದೇಶದ ಪ್ರಜೆಗಳ ವಿಶಿಷ್ಟ ಕೆಲಸ, ಸಾಧನೆ, ಪ್ರತಿಭೆಗಳನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಆಗಾಗ ಬೆನ್ನುತಟ್ಟುವುದುಂಟು. ಸಾಧ್ಯವಾದುದನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.

ಇದೀಗ ಅಂತಹ ಸೌಭಾಗ್ಯ ಹುಬ್ಬಳ್ಳಿಯ ಇಫ್ರಾ ಮುಲ್ಲಾ ಎಂಬ 6 ವರ್ಷದ ಬಾಲಕಿಗೆ ಸಿಕ್ಕಿದೆ. ಮಗಳು ಲಾಕ್ ಡೌನ್ ಸಮಯದಲ್ಲಿ ಮನೆಯೊಳಗೆ ಯೋಗ ಮಾಡುತ್ತಿರುವ ವಿಡಿಯೊವನ್ನುತಂದೆ ಹುಬ್ಬಳ್ಳಿಯ ಇಮ್ತಿಯಾಜಹಮದ್ ಮುಲ್ಲಾ ಟ್ವೀಟ್ ಮಾಡಿದ್ದರು. ಅದನ್ನು ನೋಡಿದ ಪ್ರಧಾನಿಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿರುವ ಮೋದಿಯವರ ಖಾತೆಯಲ್ಲಿದ್ದ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿ ಲೈಕ್ ಕೊಟ್ಟಿದ್ದಾರೆ, ಕೆಲವರು ಹಂಚಿಕೊಂಡಿದ್ದಾರೆ.

ಒಂದನೇ ತರಗತಿ ಮುಗಿಸಿ ಎರಡನೇ ತರಗತಿಗೆ ಹೋಗುತ್ತಿರುವ ಇಫ್ರಾ ಮುಲ್ಲಾ  ಲಾಕ್ ಡೌನ್ ಮಧ್ಯೆ ಒಂದು ದಿನ ಟಿ ವಿ ನೋಡುತ್ತಾ ಯೋಗ ಮಾಡುತ್ತಿದ್ದಳು. ಅದನ್ನು ಅವಳ ತಾಯಿ ನೋಡಿ ವಿಡಿಯೊ ಮಾಡಿ ಪತಿಗೆ ಕಳುಹಿಸಿದ್ದರು. ಜನರು ಲಾಕ್ ಡೌನ್ ಸಮಯದಲ್ಲಿ ಫಿಟ್ ಆಗಿರಲು ಯೋಗ ಮಾಡಿ ಎಂದು ಹೇಳಿ ಇಮ್ತಿಯಾಜಹಮ್ಮದ್ ಮುಲ್ಲಾ ಟ್ವಿಟ್ಟರ್ ನಲ್ಲಿ ವಿಡಿಯೊ ಹಾಕಿ ಶೇರ್ ಮಾಡಿದ್ದರು. ಟ್ವೀಟ್ ಮಾಡುವಾಗ ಪಿಎಂ ನರೇಂದ್ರ ಮೋದಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.

ಇದನ್ನು ಮರುದಿನ ನೋಡಿದ ಮೋದಿಯವರು ರಿಟ್ವೀಟ್ ಮಾಡಿ 'ಗ್ರೇಟ್, ಸ್ಟೇ ಹೋಂ ಸ್ಟೇ ಹೆಲ್ದಿ ಅಂಡ್ ಫಿಟ್' ಎಂದು ಬರೆದರು. ಅದನ್ನು 1.9 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು 2,500 ಮಂದಿ ರಿಟ್ವೀಟ್ ಮಾಡಿ 23 ಸಾವಿರ ಮಂದಿ ಲೈಕ್ ಕೊಟ್ಟಿದ್ದಾರೆ.

ಇಫ್ರಾ ಮುಲ್ಲಾ , ಶಾರೀರಿಕ ಶಿಕ್ಷಣ ಮತ್ತು ಯೋಗವನ್ನು ಬಹಳ ಇಷ್ಟಪಡುತ್ತಾಳಂತೆ. ಶನಿವಾರಗಳಂದು ಶಾಲೆಯಲ್ಲಿ ಯೋಗ ತರಗತಿಯನ್ನು ಒಂದು ದಿನ ಕೂಡ ತಪ್ಪಿಸುವುದಿಲ್ಲವಂತೆ. ಯೋಗ ತರಗತಿ ಮೂಲಕ ಕಲಿಯದಿದ್ದರೂ ಸ್ವ ಆಸಕ್ತಿಯಿಂದ ಟಿ ವಿ ನೋಡಿ, ವಿಡಿಯೊ ನೋಡಿ ಮಾಡುತ್ತಾಳಂತೆ.

ಈಕೆಯ ತಂದೆ ಹುಬ್ಬಳ್ಳಿಯಲ್ಲಿ ನೈರುತ್ವ ರೈಲ್ವೆ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಕೃತಜ್ಞತೆ ಹೇಳಿದ ಇಮ್ತಿಯಾಜಹಮ್ಮದ್ ಮುಲ್ಲಾ, ನನ್ನ ಮಗಳಿಗೆ ಇದರಿಂದ ಜನಪ್ರಿಯತೆ ಸಿಕ್ಕಿದ್ದು ನಮ್ಮ ಇಡೀ ಕುಟುಂಬಕ್ಕೆ ಸಂತೋಷವಾಗಿದೆ. ಈಗ ನನ್ನ ದೊಡ್ಡ ಮಗಳು ಸಹ ವಿಡಿಯೊ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಪ್ರಧಾನಿ ಮೋದಿ ಅದನ್ನು ಹಂಚಿಕೊಳ್ಳುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾಳೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com