ಕೊರೋನಾ ವೈರಸ್ ನಿಂದ ಗುಣಮುಖರಾದ ಸಲೀಂ ಹೆಗ್ಡೆ
ಕೊರೋನಾ ವೈರಸ್ ನಿಂದ ಗುಣಮುಖರಾದ ಸಲೀಂ ಹೆಗ್ಡೆ

ವೈದ್ಯರ ಕಂಡರೆ ಹೊಡೆಯುವ ಜನಗಳ ನಡುವೆ ಜೀವ ಉಳಿಸಿದ ಆರೋಗ್ಯ ಕಾರ್ಯಕರ್ತರ ಕುರಿತು 'ಸಲೀಂ' ಹೇಳಿದ ಮಾತು ಕೇಳಿ!

ಕೊರೋನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲು ಬಂದಿದ್ದ ವೈದ್ಯರಿಗೆ ಥಳಿಸಿ ಅಟ್ಟಾಡಿಸಿದ್ದ ಪಾದರಾಯನಪುರದ ಅವಿವೇಕಿಗಳ ಸುದ್ದಿ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದ  ವ್ಯಕ್ತಿಯೊಬ್ಬರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕುರಿತು ಆಡಿರುವ ಮಾತುಗಳು ಜನ ಸಾಮಾನ್ಯರ ಹೃದಯ ಗೆದ್ದಿದೆ.

ಬೆಂಗಳೂರು: ಕೊರೋನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲು ಬಂದಿದ್ದ ವೈದ್ಯರಿಗೆ ಥಳಿಸಿ ಅಟ್ಟಾಡಿಸಿದ್ದ ಪಾದರಾಯನಪುರದ ಅವಿವೇಕಿಗಳ ಸುದ್ದಿ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದ  ವ್ಯಕ್ತಿಯೊಬ್ಬರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕುರಿತು ಆಡಿರುವ ಮಾತುಗಳು ಜನ ಸಾಮಾನ್ಯರ ಹೃದಯ ಗೆದ್ದಿದೆ.

ಹೌದು ಇತ್ತೀಚೆಗೆ ಕೊರೋನಾ ವೈರಸ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಸಲೀಂ ಹೆಗ್ಡೆ ಇದೀಗ ಸೋಂಕು ಮುಕ್ತರಾಗಿದ್ದು, ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ. ಆದರೆ ಮಾರಕ ವೈರಸ್ ನಿಂದ ತಮ್ಮನ್ನು ಕಾಪಾಡಿದ ವೈದ್ಯರನ್ನು ಮತ್ತು ಆರೋಗ್ಯ  ಕಾರ್ಯಕರ್ತರನ್ನು ಮರೆಯದ ಸಲೀಂ ಹೆಗ್ಡೆ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೀವದ ಹಂಗು ತೊರೆದು ಹೋರಾಡುತ್ತಿರುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕಾರ್ಯ ದೇವರ ಕಾರ್ಯ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ನಿಜಕ್ಕೂ ದೇವರು ಎಂದು  ಭಾವನಾತ್ಮಕವಾಗಿ ಹೇಳಿದ್ದಾರೆ.

'ಪೊಲೀಸರು ಅತ್ಯಂತ ಪ್ರೀತಿಯಿಂದ ನನ್ನನ್ನು ನಡೆಸಿಕೊಂಡರು. ವೆನ್ಲಾಕ್‌ ಆಸ್ಪತ್ರೆಯಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ತಕ್ಷಣದಲ್ಲೇ ಒದಗಿಸುತ್ತಿದ್ದರು. ಬಿಸಿ ನೀರು, ಆಹಾರವನ್ನು ಕೇಳಿ, ಕೇಳಿ ಪೂರೈಸುತ್ತಿದ್ದರು. ಒಂದು ದಿನ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಶೌಚಾಲಯದಲ್ಲಿ ನೀರು ಇರಲಿಲ್ಲ. ನಾನು ವಿಷಯ ತಿಳಿಸುತ್ತಿದ್ದಂತೆ ಬಂದು ನೀರು ಒದಗಿಸಿದರು. ವೈದ್ಯರು, ನರ್ಸ್‌ಗಳು ನಮ್ಮ ಜೀವ ಉಳಿಸಲು ಪಡುತ್ತಿರುವ ಕಷ್ಟ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಮಗಾಗಿ ಅವರು ರಕ್ಷಣಾ ಕವಚ ಧರಿಸಿಕೊಂಡು ಈ ಬೇಸಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಉಳಿಸಲು ಕಷ್ಟಪಡುತ್ತಿರುವ ಅವರಿಗೆ ಒಳ್ಳೆಯದನ್ನು ಬಯಸಲು ನಾವೆಲ್ಲಾ ಪ್ರಾರ್ಥಿಸಬೇಕಿದೆ' ಎಂದು ಹೇಳಿದ್ದಾರೆ.

ಇಷ್ಟಕ್ಕೂ ಯಾರು ಸಲೀಂ ಹೆಗ್ಡೆ?
ಸಲೀಂ ಹೆಗ್ಡೆ ಮಂಗಳೂರಿನ ತೊಕ್ಕೊಟ್ಟು ಸಮೀಪದ ನಿವಾಸಿ. ಈ ಹಿಂದೆ ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಆಗಿದ್ದರು. ದೆಹಲಿಯಿಂದ ವಾಪಸ್ ಆದ ಬಳಿಕ ಅವರಲ್ಲಿ ತೀವ್ರ ಜ್ವರ ಮತ್ತು ಗಂಟಲುನೋವು ಕಾಣಿಸಿಕೊಂಡಿತ್ತು. ಈ ವೇಳೆ ಅವರನ್ನು  ಕೊರೋನಾ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ವೈರಸ್ ಸೋಂಕು ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಸಲೀಂ ಹೆಗ್ಡೆ ಸಂಪೂರ್ಣ ಗುಣಮುಖರಾಗಿದ್ದು, ಚಿಕಿತ್ಸೆಯ ವೇಳೆ ತಮಗಾದ ಅನುಭವವನ್ನು ಮತ್ತು ವೈದ್ಯರು  ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಸ್ಮರಿಸಿದ್ದಾರೆ. ಸಲೀಂ ಹೆಗ್ಡೆ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಂತೆಯೇ ಇದೇ ವಿಡಿಯೋವನ್ನು ಹಿನ್ನಲೆಯಾಗಿಟ್ಟುಕೊಂಡು ವೈದ್ಯರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪಾದರಾಯನಪುರದ ಕೆಲ ಅವಿವೇಕಿಗಳನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com