ಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪ್ ಪ್ರವೇಶ ನಿರ್ಭಂಧ; ಸಾಮೂಹಿಕ ಪ್ರಾರ್ಥನೆಯೂ ನಿಷೇಧ

ಟಿಬೆಟಿಯನ್ ವರ್ಲ್ಡ್ ಎಂದೇ ಖ್ಯಾತಿಯಾಗಿರುವ ಬೈಲಕುಪ್ಪೆಯಲ್ಲಿ ಸಾವಿರಾರು ಮಂದಿ ಟಿಬೆಟ್ಟಿಯನ್ನರು ನೆಲೆಸಿದ್ದಾರೆ. ಈ ಟಿಬೆಟಿಯನ್ನರ ಶಿಬಿರ ಸುಮಾರು 150 ದೇಶಗಳ ಸಂಪರ್ಕ ಹೊಂದಿದೆ. ಹೀಗಾಗಿ ಕೊರೋನಾ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಂಡಿದೆ.
ಪರಿಹಾರ ನಿಧಿಗೆ ದೇಣಿಗೆ
ಪರಿಹಾರ ನಿಧಿಗೆ ದೇಣಿಗೆ

ಮಡಿಕೇರಿ: ಟಿಬೆಟಿಯನ್ ವರ್ಲ್ಡ್ ಎಂದೇ ಖ್ಯಾತಿಯಾಗಿರುವ ಬೈಲಕುಪ್ಪೆಯಲ್ಲಿ ಸಾವಿರಾರು ಮಂದಿ ಟಿಬೆಟ್ಟಿಯನ್ನರು ನೆಲೆಸಿದ್ದಾರೆ. ಈ ಟಿಬೆಟಿಯನ್ನರ ಶಿಬಿರ ಸುಮಾರು 150 ದೇಶಗಳ ಸಂಪರ್ಕ ಹೊಂದಿದೆ. ಹೀಗಾಗಿ ಕೊರೋನಾ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಂಡಿದೆ.

ಟಿಬೆಟಿಯನ್ ಕ್ಯಾಂಪ್ ಗೆ ಪ್ರವೇಶಿಸುವ ಎಲ್ಲಾ ಮುಖ್ಯ ದ್ವಾರಗಳನ್ನು ಮುಚ್ಚಲಾಗಿದೆ. ಹೊರಗಿನಿಂದ ಶಿಬಿರಕ್ಕೆ ಬರುವ ಸನ್ಯಾಸಿಗಳ ಸ್ಕ್ರೀನಿಂಗ್ ಮಾಡುವುದರ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜನವರಿ 15ರಿಂದ ಈ ಕ್ಯಾಂಪ್ ನಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸಾಮೂಹಿಕ ಪ್ರಾರ್ಥನೆಯನ್ನು ಕೂಡ ನಿಲ್ಲಿಸಲಾಗಿದೆ. ಪ್ರತಿದಿನ ನಾಲ್ಕು ಸಂನ್ಯಾಸಿಗಳು ದೈನಂದಿನ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ.

ಬೈಲಕುಪ್ಪೆ ಕ್ಯಾಂಪ್ ನಲ್ಲಿ ಸುಮಾರು 15 ಸಾವಿರ ಟಿಬೆಟಿಯಯನ್ನರಿದ್ದು ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಟಿಬೆಟಿನ್ ಕ್ಯಾಂಪ್ ನಿಂದ ಕೊರೋನಾ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡೂವರೆ ಲಕ್ಷ ರು ಹಣ ದೇಣಿಗೆ ನೀಡಿದೆ. ಜೊತೆಗೆ ಸ್ಛಳೀಯರಿಗೆ ಆಹಾರ ಕಿಟ್ ಮತ್ತು ಕುಶಾಲನಗರ ಮತ್ತು ಕೊಪ್ಪದ 3 ಸಾವಿರ ಮಂದಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com