ಕೊರೋನಾ ದೊಡ್ಡ ರೋಗವಲ್ಲ, ನಮ್ಮ ಇಚ್ಚಾ ಶಕ್ತಿಯಿಂದ ಅದನ್ನು ಗೆಲ್ಲಬಹುದು: ಕಾಮೇಗೌಡ

ಕಳೆದ 13 ದಿನಗಳಲ್ಲಿ ನನಗೆ ಕೊರೋನಾ ಬಗ್ಗೆ ಯೋಚನೆಯಿರಲಿಲ್ಲ, ನನಗೆ ನನ್ನ ಊರಿನಲ್ಲಿರುವ ಕೆರೆಗಳ ಬಗ್ಗೆಯೇ ಆತಂಕವಾಗಿತ್ತು ಎಂದು ಕಾಮೇಗೌಡರು ಹೇಳಿದ್ದಾರೆ.
ಕಾಮೇಗೌಡ
ಕಾಮೇಗೌಡ

ಬೆಂಗಳೂರು: ಕಳೆದ 13 ದಿನಗಳಲ್ಲಿ ನನಗೆ ಕೊರೋನಾ ಬಗ್ಗೆ ಯೋಚನೆಯಿರಲಿಲ್ಲ, ನನಗೆ ನನ್ನ ಊರಿನಲ್ಲಿರುವ ಕೆರೆಗಳ ಬಗ್ಗೆಯೇ ಆತಂಕವಾಗಿತ್ತು ಎಂದು  ಕಾಮೇಗೌಡರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ಬಿಟ್ಟರೇ ನನಗೆ ಬೇರೆ ಯಾವುದೇ ಕೆಲಸವಿರಲಿಲ್ಲ ಎಂದು 84 ವರ್ಷದ ಕಾಮೇಗೌಡ ತಿಳಿಸಿದ್ದಾರೆ.  ಜುಲೈ 20 ರಂದು ಕಾಮೇಗೌಡರಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು, ಅವರನ್ನು ಮಂಡ್ಯ ಮೆಡಿಕಲ್ ಸೈನ್ಸ್ ಇನ್ಸ್ ಸ್ಟಿಟ್ಯೂಟ್ ಗೆ ದಾಖಲಿಸಲಾಗಿತ್ತು.  ರೋಗ ಲಕ್ಷಣಗಳಿಲ್ಲದ ಕಾರಣ ಅವರನ್ನು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಕೊರೋನಾ ದೊಡ್ಡ ರೋಗವಲ್ಲ, ಕೆಮ್ಮು ನೆಗಡಿ ಮತ್ತು ಜ್ವರ ಅಷ್ಟೇ, ನಾವು ಒಂದು ದಿನ ಹುಟ್ಟುತ್ತೇವೆ, ಇನ್ನೊಂದು ದಿನ ಸಾಯುತ್ತೇವೆ, ನಮ್ಮ ವಿಲ್ ಪವರ್ ನಮ್ಮನ್ನು ಬದುಕುವಂತೆ ಮಾಡುತ್ತದೆ. ನಮ್ಮ ಇಚ್ಚಾ ಶಕ್ತಿಯಿಂದ ಕೊರೋನಾ ಗೆಲ್ಲಬಹುದು. ಕೇವಲ ಮೂರರಿಂದ ಐದು ದಿನಗಳಲ್ಲಿ ಕೊರೋನಾ ವಾಸಿಯಾಗುತ್ತದೆ. ಯಾವುದೇ ಸುಳ್ಳು ಸುದ್ದಿಗಳನ್ನು ಜನ ನಂಬಬಾರದು ಎಂದು ಕಾಮೇಗೌಡ ಹೇಳಿದ್ದಾರೆ.

ಕಾಲಿನ ಗಾಯದ ಕಾರಣ ಆಸ್ಪತ್ರೆಗೆ ದಾಖಲಾಗಲು ಹೋಗಿದ್ದ ಕಾಮೇಗೌಡರಿಗೆ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್ ಬಂದಿತ್ತು.  ಕಾಲಿನ ಗಾಯದ ನೋವಿನ ಜೊತೆಗೆ ಮನೆಯ ಊಟವಿರಲಿಲ್ಲ ಎಂಬದನ್ನು ಬಿಟ್ಟರೇ ನನಗೆ ಬೇರೆ ಯಾವುದೇ ತೊಂದರೆಯಿರಲಿಲ್ಲ ಎಂದು ಹೇಳಿದ್ದಾರೆ.

ಕಾಮೇಗೌಡರು ಆಸ್ಪತ್ರೆಯಲ್ಲಿದ್ದಾಗ ಮಂಡ್ಯ ಡಿಸಿ ವೆಂಕಟೇಶ್ ಕೆರೆಗಳ ಕಡೆ ಗಮನ ಹರಿಸಿದ್ದರು. ಜನರು ಕೆರೆಯಲ್ಲಿ ತಮ್ಮ ಬಟ್ಟೆಗಳನ್ನು ಮತ್ತು ಎಮ್ಮೆಗಳನ್ನು ತೊಳೆಯಬಾರದು ಎಂದು  ಬೋರ್ಡ್ ಬರೆಸಿ ಕೆರೆಯ ಬಳಿ ಹಾಕಿಸಿದ್ದರು, ಕೆರೆಗಳ ನೀರು ಇರುವುದು ಪ್ರಾಣಿಗಳಿಗಾಗಿ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com