ತಲಕಾವೇರಿ ಭೂಕುಸಿತ: ನಾಪತ್ತೆಯಾಗಿರುವ ನಾಲ್ವರಿಗಾಗಿ ಮುಂದುವರೆದ ಶೋಧಕಾರ್ಯ

ತಲಕಾವೇರಿ ಭೂಕುಸಿತ ಉಂಟಾಗಿ ಕಣ್ಮರೆಯಾದವರ ಪತ್ತೆಗಾಗಿ ಸೋಮವಾರವೂ ತ್ವರಿಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಎನ್'ಡಿಆರ್'ಎಫ್, ಎಸ್'ಡಿಆರ್'ಎಫ್, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಮಂದಿಯಿಂದ ಶೋಧ ಕಾರ್ಯ ನಡೆಯಿತು. 

Published: 11th August 2020 07:15 AM  |   Last Updated: 11th August 2020 07:15 AM   |  A+A-


NDRF and police personnel carry out rescue operations at Talacauvery

ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾಪಡೆಗಳು

Posted By : Manjula VN
Source : The New Indian Express

ಮಡಿಕೇರಿ: ತಲಕಾವೇರಿ ಭೂಕುಸಿತ ಉಂಟಾಗಿ ಕಣ್ಮರೆಯಾದವರ ಪತ್ತೆಗಾಗಿ ಸೋಮವಾರವೂ ತ್ವರಿಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಎನ್'ಡಿಆರ್'ಎಫ್, ಎಸ್'ಡಿಆರ್'ಎಫ್, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಮಂದಿಯಿಂದ ಶೋಧ ಕಾರ್ಯ ನಡೆಯಿತು. 

ಸೋಮವಾರ ಜೆಸಿಬಿ, ಎರಡು ಹಿಟಾಚಿ ಬಳಸಿ ಶೋಧ ಕಾರ್ಯಕ್ಕೆ ರಕ್ಷಣಾ ತಂಡ ಇಳಿದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್'ಪಿ ಕ್ಷಣಾ ಮಿಶ್ರಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. 

ಕಾರ್ಯಾಚರಣೆ ವೇಳೆ ಅರ್ಚಕ ನಾರಾಯಣಾಚಾರ್ ಅವರ ಮನೆಯಿದ್ದ ಸ್ಥಳದಲ್ಲಿ ಪುಸ್ತಕ, ಪಾತ್ರೆ, ಬಟ್ಟೆ ಮತ್ತಿತರ ವಸ್ತು ಪತ್ತೆಯಾಯಿತು. ತಲಕಾವೇರಿ ಎತ್ತರ ಪ್ರದೇಶವಾದ್ದರಿಂದ ಮಳೆ, ಕೆಸರಿನಿಂದ ಕೂಡಿರುವ ಮಣ್ಣು ಮತ್ತೊಂದೆಡೆ ಮಂಜು ವಾತಾವರಣ ಕಾರ್ಯಾಚರಣೆಗ ಸ್ವಲ್ಪ ಅಡ್ಡಿ ಮಾಡಿತು. ಇದರಿಂದ ಸೋಮವಾರ ಕಣ್ಮರೆಯಾದವರ ಸುಳಿವು ಸಿಗಲಿಲ್ಲ. 

ಅರ್ಚಕ ನಾರಾಯಣ ಅಚಾರ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ವಿದೇಶದಿಂದ ತಲಕಾವೇರಿಗೆ ಆಗಮಿಸಿದ್ದು, ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿ ಸಿಕ್ಕ ಅವಶೇಷಗಳನ್ನು ನೋಡಿ ಭಾವುಕರಾದರು. ಅರ್ಚಕರ ಬಟ್ಟೆ, ಪೂಜಾ ಸಾಮಾಗ್ರಿ, ಶಾಲ ತಬ್ಬಿ ಕಣ್ಣೀರು ಹಾಕಿದರು.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp