ಬೆಂಗಳೂರು ಹಿಂಸಾಚಾರ: ಯಲಹಂಕ ಬಳಿಯ ಎಸ್‌ಡಿಪಿಐ ಕಚೇರಿ ಮೇಲೆ ಸಿಸಿಬಿ ದಾಳಿ. ಶಸ್ತಾಸ್ತ್ರ ವಶ
ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂದೆ ಸಿಸಿಬಿ ಪೊಲೀಸರ ತಂಡ ಯಲಹಂಕದ ಹೆಗಡೆ ನಗರದಲ್ಲಿರುವ ಎಸ ಪಿಡಿಐ ಕಚೇರಿ ಮೇಲೆ ದಾಳಿ ನಡೆಸಿದೆ.ದಾಳಿಯ ವೇಳೆ ಶಸ್ತ್ರಾಸ್ತ್ರ ಮತ್ತು ಇಂಧನವಿರುವ ಕ್ಯಾನ್ ಗಳನ್ನು ವಶಪಡಿಸಿಕೊಂಡಿದ್ದು 8 ಮಂದಿಯನ್ನು ಬಂಧಿಸಲಾಗಿದೆ.
Published: 17th August 2020 08:06 AM | Last Updated: 17th August 2020 08:06 AM | A+A A-

ಸಿಸಿಬಿ ಪೊಲೀಸ್ ಕಚೇರಿ
ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂದೆ ಸಿಸಿಬಿ ಪೊಲೀಸರ ತಂಡ ಯಲಹಂಕದ ಹೆಗಡೆ ನಗರದಲ್ಲಿರುವ ಎಸ ಪಿಡಿಐ ಕಚೇರಿ ಮೇಲೆ ದಾಳಿ ನಡೆಸಿದೆ.ದಾಳಿಯ ವೇಳೆ ಶಸ್ತ್ರಾಸ್ತ್ರ ಮತ್ತು ಇಂಧನವಿರುವ ಕ್ಯಾನ್ ಗಳನ್ನು ವಶಪಡಿಸಿಕೊಂಡಿದ್ದು 8 ಮಂದಿಯನ್ನು ಬಂಧಿಸಲಾಗಿದೆ.
ಕಚೇರಿ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಎಸ್ ಡಿ ಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ನಡೆದ ದಾಳಿಲ್ಲಿ ಬಳಸಿದ ರಾಸಾಯನಿಕ ವಸ್ತು ಮತ್ತು ಇಂಧನದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ.
ಇದರ ಜೊತೆಗೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 57 ಮಂದಿಯನ್ನು ಬಂಧಿಸಿದ್ದಾರೆ.ಇದುವರೆಗೆ ಒಟ್ಟು 364 ಮಂದಿಯನ್ನು ಬಂಧಿಸಲಾಗಿದೆ. ಸಂಪಿಗೆ ಹಳ್ಳಿ , ರಾಚೇನಹಳ್ಳಿ ಮತ್ತು ಥಣಿಸಂದ್ರದಲ್ಲಿ 57 ಮಂದಿಯನ್ನು ಬಂಧಿಸಿದ್ದು 52 ಎಫ್ ಐಆರ್ ದಾಖಲಿಸಲಾಗಿದೆ.