ಮೈಸೂರು ದಸರಾ ಮೇಲೂ ಕೊರೋನಾ ಕರಿನೆರಳು: ಎರಡನೇ ಬಾರಿಗೆ ವಿಶ್ವ ಪ್ರಸಿದ್ದ ಜಂಬೂ ಸವಾರಿ ರದ್ದು?

ಕಳೆದ 8 ತಿಂಗಳಿಂದ ಕೊರೋನಾ ಅಟ್ಟಹಾಸ ಪ್ರಪಂಚಾದಾದ್ಯಂತ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಪ್ರಸಿದ್ದ ಮೈಸೂರು ದಸರಾ ಉತ್ಸವದ ಮೇಲೂ ಕರಿನೆರಳು ಬೀರಿದೆ, ಇದರ ಜೊತೆಗೆ ಪ್ರವಾಹ ಕೂಡ ಮತ್ತೊಂದು ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ 8 ತಿಂಗಳಿಂದ ಕೊರೋನಾ ಅಟ್ಟಹಾಸ ಪ್ರಪಂಚಾದಾದ್ಯಂತ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಪ್ರಸಿದ್ದ ಮೈಸೂರು ದಸರಾ ಉತ್ಸವದ ಮೇಲೂ ಕರಿನೆರಳು ಬೀರಿದೆ, ಇದರ ಜೊತೆಗೆ ಪ್ರವಾಹ ಕೂಡ ಮತ್ತೊಂದು ಕಾರಣವಾಗಿದೆ.

ಈ ವರ್ಷ ದಸರಾ ಆಚರಣೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ನಡೆಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.  

ನಾಡ ಹಬ್ಬದ ಅಂತಿಮ ಹಂತದ ಕೇಂದ್ರ ಬಿಂದುವಾಗಿದ್ದ ಜಂಬೂಸವಾರಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ನಡೆಯುತ್ತಿತ್ತು, ಈ ಬಾರಿ ಜಂಬೂ ಸವರಾ ಜೊತೆಗೆ ಇತರ ಕಾರ್ಯಕ್ರಮಗಳು ಕೂಡ ಕಳೆಗುಂದಲಿವೆ.

ಇದುವರೆಗೂ ದಸರಾ ಆನೆಳನ್ನು ಕರೆತರುವ ಬಗ್ಗೆ ಯಾವುದೇ ಕೆಲಸ ನಡೆದಿಲ್ಲ,  ಈ ವೇಳೆಗಾಗಲೇ ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ತರಬೇತಿಗಾಗಿ ಮೈಸೂರಿಗೆ ಕರೆ ತರಲಾಗುತ್ತಿತ್ತು.

ಆನೆಗಳಿಗೆ ತರಬೇತಿ ನೀಡಲು ನಮಗೆ 70 ದಿನ ಬೇಕು. ಮೈಸೂರು ಜಿಲ್ಲಾಧಿಕಾರಿ ಅರಣ್ಯ ಇಲಾಖೆಗೆ ಪತ್ರ ಬರೆಯಬೇಕು, ಆದರೆ ಇದುವರೆಗೂ ಮೈಸೂರು ಡಿಸಿಯಿಂದ ಯಾವುದೇ ಪತ್ರ ಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

10 ದಿನಗಳ ದಸರಾ ಆಚರಣೆ ಈ ವರ್ಷ ಅಕ್ಟೋಬರ್ 25ಕ್ಕೆ ಮುಗಿಯಲಿದೆ. ವಿಜಯದಶಮಿ ದಿವಸ ತರಬೇತಿಗೊಳಿಸಿದ ಆನೆಗಳು 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆ ಮಾಡುತ್ತದೆ. ಈ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸುಮಾರು 35 ರಿಂದ 40 ಲಕ್ಷ ಮಂದಿ ಹಾಜರಾಗುತ್ತಾರೆ. ಹೀಗಾಗಿ ಜಂಬೂ ಸವಾರಿ ನಡೆಸುವ ಬಗ್ಗೆ ಸರ್ಕಾರ ಪುನರ್ ಚಿಂತನೆ ನಡೆಸಬೇಕು ಎಂದು ಹಿರಿಯ ಐಎಫ್ ಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಈ ವರ್ಷ ಜಂಬೂ ಸವಾರಿ ನಡೆಸುವುದು ಬೇಡ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಈಗಾಗಲೇ ಜಾನಪದ ಕಲಾವಿದರನ್ನು ರದ್ದುಗೊಳಿಸಲಾಗಿದೆ. ಆದರೆ ಒಡೆಯರ್ ಮನೆತನದ ಸಾಂಪ್ರಾದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸಚಿವರೊಬ್ಬರು ತಿಳಿಸಿದ್ದಾರೆ. 

1610 ರಲ್ಲಿ ಮೊದಲ ಬಾರಿಗೆ ಜಂಬೂ ಸವಾರಿ ಆರಂಭವಾಯಿತು ಇದುವರೆಗೂ, ನಿರಂತರವಾಗಿ ನಡೆದುಕೊಂಡು ಬಂದಿರುವ ಜಂಬೂ ಸವಾರಿ ಒಂದು ಬಾರಿ ಮಾತ್ರ ರದ್ದಾಗಿದೆ, 1953 ರಲ್ಲಿ ಅರಮನೆ ಹೊರಭಾಗ ದಲಿತ ಕುಸ್ತಿಪಟುಗಳು ಮತ್ತು ಮೇಲ್ಜಾತಿಯವರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವರು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಈ ವೇಳೆ
ಜಂಬೂ ಸವಾರಿ ರದ್ದಾಗಿತ್ತು, ಅದಾದ ನಂತರ ಈಗ ಇನ್ನೊಮ್ಮೆ ರದ್ದಾಗುವ ಸಾಧ್ಯತೆಯಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com