ಡಾ. ನಾಗೇಂದ್ರ ಆತ್ಮಹತ್ಯೆ: ಮೈಸೂರು ಸಿಇಒ ವಿರುದ್ಧ ಎಫ್ಐಆರ್ ದಾಖಲು

ನಂಜನಗೂಡು ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹಾಕಿದ ಒತ್ತಡ, ಮಾನಸಿಕ ಹಿಂಸೆಯೇ ಕಾರಣ ಎಂದು ವೈದ್ಯರ ತಂದೆ ಟಿಎಸ್ ರಾಮಕೃಷ್ಣ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಡಾ.ನಾಗೇಂದ್ರ
ಡಾ.ನಾಗೇಂದ್ರ

ಮೈಸೂರು: ನಂಜನಗೂಡು ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹಾಕಿದ ಒತ್ತಡ, ಮಾನಸಿಕ ಹಿಂಸೆಯೇ ಕಾರಣ ಎಂದು ವೈದ್ಯರ ತಂದೆ ಟಿಎಸ್ ರಾಮಕೃಷ್ಣ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಮೂಲಕ ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಕಾರಣವಾದಂತಹ ಸಿಇಒ ಪ್ರಶಾಂತ್ ಮಿಶ್ರಾ ವಿರುದ್ಧ ಸದ್ಯ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಟಿಹೆಚ್ಒ ಡಾ.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಜಿಲ್ಲಾ ಪಂಚಾಯ್ತಿ ಸಿಇಒ ಒತ್ತಡವೇ ಘಟನೆಗೆ ಕಾರಣವಾಗಿದೆ  ಸಾಕಷ್ಟು ಸಿಬ್ಬಂದಿಯಿಲ್ಲ ಎಂಬ ವಿಚಾರವನ್ನು ಮಗ ಜಿಲ್ಲಾಧಿಕಾರಿಯವರಿಗೆ ಮತ್ತು ಇತರೆ ಅಧಿಕಾರಿಗಳಿಗೆ ಹೇಳಿದ್ದರೂ ಅದನ್ನು ಲೆಕ್ಕಿಸದೆ  ಒತ್ತಡ, ಬೆದರಿಕೆ  ಹಾಕಿ ಪರೋಕ್ಷವಾಗಿ  ಮಗನ ಸಾವಿಗೆ ಕಾರಣವಾಗಿದ್ದಾರೆ ಅವರು ದೂರಿನಲ್ಲಿ ಹೇಳಿದ್ದಾರೆ.  ಹೀಗಾಗಿ ತಂದೆಯ ದೂರಿನ ಹಿನ್ನಲೆಯಲ್ಲಿ ಸಿಇಒ ಪ್ರಶಾಂತ್  ಕುಮಾರ್ ಮಿಶ್ರಾ ವಿರುದ್ಧ  ಎಫ್ಐಆರ್ ದಾಖಲಾಗಿದೆ.

ಡಾ. ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಮೈಸೂರಿನ ನಂಜನಗೂಡು ವೈದ್ಯರು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಅಮಾನತು ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com