ಮೈಸೂರು: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಬಿಐ ಬಲೆಗೆ ಬಿದ್ದ ರೈಲ್ವೆ ಕ್ಲರ್ಕ್

ಮೈಸೂರು ರೈಲ್ವೆ ಪರ್ಸನಲ್ ವಿಭಾಗದ ಹಿರಿಯ ಗುಮಾಸ್ತರೊಬ್ಬರು ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಬಿಐ ಗೆ ಸಿಕ್ಕಿ ಬಿದ್ದಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೈಸೂರು ರೈಲ್ವೆ ಪರ್ಸನಲ್ ವಿಭಾಗದ ಹಿರಿಯ ಗುಮಾಸ್ತರೊಬ್ಬರು ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಬಿಐ ಗೆ ಸಿಕ್ಕಿ ಬಿದ್ದಿದ್ದಾರೆ. 

ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡುವ ಸಲುವಾಗಿ 25 ಸಾವಿರ ರು ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದಿದ್ದಾರೆ. 

ಅನುಕಂಪದ ಆಧಾರದ ಮೇಲೆ ಕುಟುಂಬದ ಯುವ ಸದಸ್ಯನೊಬ್ಬನಿಗೆ ನೌಕರಿ ನೀಡಲು  ಎಲ್ ಕೆ ಶ್ರೀಕಾಂತ್ 1 ಲಕ್ಷ ರು ಲಂಚ ಕೇಳಿದ್ದರು, ಅದರ ಮೊದಲ ಕಂತನ್ನು ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ.  

2011ರಲ್ಲಿ ರೈಲ್ವೆ ಇಲಾಖೆ ಪರ್ಸನಲ್ ವಿಭಾಗದ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ವಿಭಾಗಕ್ಕೆ ನೇಮಕವಾದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಿದ್ದ ಮಹಿಳೆಯ ಕುಟುಂಬದ ಯುವಕನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರತಿತ್ತು. ನೇಮಕಾತಿ ಆದೇಶ ನೀಡಲು ಶ್ರೀಕಾಂತ್ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತ ಸಿಬಿಐ ಗೆ ದೂರು ನೀಡಿದ್ದರು.

ಗುರುವಾರ ಬೆಳಗ್ಗೆ 11.30ರ ವೇಳೆಗೆ ಮೈಸೂರು ರೈಲ್ವೆ ವಿಭಾಗೀಯ ಮ್ಯಾನೇಜರ್ ಕಚೇರಿಗೆ ಭೇಟಿ ನೀಡಿದ್ದ ಸಿಬಿಐ ಗೆ ಶ್ರೀಕಾಂತ್ ಅಲ್ಲಿ ಸಿಗಲಿಲ್ಲ.  ಆದರೆ ನಂತರ ಕಾಲೇಜೊಂದರ ಬಳಿ 25 ಸಾವಿರ ರು ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ 90 ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗುವುದು ಎಂದು ತಿಳಿದು ಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com