ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ, ಚಿತ್ರಹಿಂಸೆ: 48 ಲಕ್ಷ ರೂ. ವಸೂಲಿ; ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ

ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಮಾರಾಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ವರ್ತೂರು ಪ್ರಕಾಶ್
ವರ್ತೂರು ಪ್ರಕಾಶ್

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಅವರ ಕಾರು ಚಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಮಾರಾಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಮಾಜಿ ಸಚಿವರು ಹಾಗೂ ಕಾರು ಚಾಲಕ ಸುನೀಲ್'ನನ್ನು 3 ದಿನ ವಶದಲ್ಲಿಟ್ಟುಕೊಂಡು ಚಿತ್ರಹಿಂಸೆ ನೀಡಿದ ಬಳಿಕ ವಸ್ತೂರು ಪ್ರಕಾಶ್ ಅವರನ್ನು ಅಪಹರಣಕಾರರು ಹೊಸಕೋಟೆಯ ಬಳಿತಳ್ಳಿಯಲ್ಲಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. 

ವರ್ತೂರು ಪ್ರಕಾಶ್ ಅವರ ಕಾರು ಚಾಲಕ ಸುನೀಲ್ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 

ಈ ಸಂಬಂಧ ಬೆಂಗಳೂರಿನ ಬೆಳ್ಳಂದೂರಿನ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಎಂಟು ಅಪಹರಣಕಾರರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಘಟನೆ ನಡೆದು ನಾಲ್ಕೈದು ದಿನಗಳ ಬಳಿಕ ವರ್ತೂರು ಪ್ರಕಾಶ್ ಅವರು ದೂರು ನೀಡುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಣಕಾಸಿನ ವಿಚಾರಕ್ಕೆ ಅತವಾ ಬೇರೆ ವಿಚಾರಕ್ಕೆ ಅಪಹರಣವಾಗಿತ್ತೇ ಎಂಬುದರ ಕುರಿತ ಮಾಹಿತಿ ಮುಂದಿನ ದಿನಗಳಲ್ಲಿ ಬೆಳಕಿಗೆ ಬರಬೇಕಿದೆ. 

ನ,25ರಂದು ಸಂಜೆ 7 ಗಂಟೆ ಸುಮಾರಿಗೆ ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಇರುವ ನನ್ನ ಫಾರಂ ಹೌಸ್'ನಿಂದ ಕಾರಿನಲ್ಲಿ ನಗರಕ್ಕೆ ವಾಪಸ್ ಆಗುತ್ತಿದ್ದೆ. ಕಾರು ಚಾಲಕ ಸುನೀಲ್ ಕಾರು ಚಾಲನೆ ಮಾಡುತ್ತಿದ್ದ. ಫಾರಂಹೌಸ್'ನಿಂದ ಒಂದು ಕಿ.ಮೀ ದೂರದಲ್ಲಿ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಮ್ಮ ಕಣ್ಣಿಗೆ ಬಟ್ಟೆಕಟ್ಟಿ ಕಾರಿನಲ್ಲಿ ಅಪಹರಣ ಮಾಡಿದ್ದರು. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರೂ.30 ಕೋಟಿ ಬೇಡಿಕೆ ಇಟ್ಟಿದ್ದರು. ಹಣ ತರಿಸಿಕೊಡಲು ನಿರಾಕರಿಸಿದಾಗ ಕೈಕಾಲುಗಳನ್ನು ಕಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. 

ಚಾಲಕ ಸುನೀಲ್'ಗೆ ಹಣ ಎಲ್ಲಿಟ್ಟಿದ್ದಾರೆಂದೆ ಹೇಳಿ ಎಂದು ಚಿತ್ರಹಿಂಸೆ ನೀಡಿದರು. ಅಪಹರಣಕಾರರ ಹಿಂಸೆ ತಾಳಲಾರದೆ ನ.26ರಂದು ನಯಾಜ್ ಎಂಬ ಹುಡುಗನಿಗೆ ಕರೆ ಮಾಡಿದ್ದೆ. ಆತನ ಕೋಲಾರದ ಕಾಫಿ ಡೇ ಶಾಪ್ ಬಳಿ ರೂ.48 ಲಕ್ಷ ಹಣವನ್ನು ಅಪಹರಣಕಾರರಿಗೆ ಕೊಟ್ಟು ಹೋಗಿದ್ದ. ಆ ಬಳಿಕವೂ ಅಪರಹಣಕಾರರು ಹೆಚ್ಚಿನ ಹಣಕ್ಕಾಗಿ ಹಿಂಸೆ ನೀಡಿ, ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು. 

ಮಾರಕಾಸ್ತ್ರಗಳಿಂದ ಹೆಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಚಾಲಕ ಸುನೀಲ್'ನನ್ನು ಅಪಹರಣಕಾರರು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು, ಪ್ರಜ್ಞೆ ಬಂದು ಚಾಲಕ ಸುನೀಲ್ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ದುಷ್ಕರ್ಮಗಿಲು ಎರಡು ತಾಸು ಸುನೀಲ್'ಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಪೊಲೀಸರಿಗೆ ದೂರು ನೀಡಬಹುದು ಎಂದು ಅಪಹರಣಕಾರರು ನ.26 ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೊಸಕೋಟೆ ಬಳಿಕ ಶಿವನಾಪುರ ಗ್ರಾಮದ ಬಳಿಯಿರುವ ಖಾಲಿ ಮೈದಾನದಲ್ಲಿ ನನ್ನನ್ನು ತಳ್ಳಿದರು. ಪೊಲೀಸರಿಗೆ ದೂರು ನೀಡಿದರೆ. ನಿನ್ನ ಮತ್ತು ನಿನ್ನ ಮಕ್ಕಳನ್ನು ಮುಗಿಸುವುದಾಗಿ ಬೆದರಿಕೆ ಹಾಗಿ ನನ್ನ ಕಾರಿನ ಸಮೇತ ಪರಾರಿಯಾದರು. ಬಳಿಕ ನಾನು ಅಪರಿಚಿತ ಕಾರನ್ನು ಅಡ್ಡಹಾಕಿ ಕೆ.ಆರ್.ಪುರಂನಲ್ಲಿರುವ ಸತ್ಯಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇ. ಹೀಗಿರುವಾಗ ಮಂಗಳವಾರ ನನ್ನ ಕಾರು ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇನೆಂದು ವರ್ತೂರು ಪ್ರಕಾಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. 

ತನಿಖೆಗೆ ವಿಶೇಷ ತಂಡ ರಚನೆ
ಈ ನಡುವೆ ಪ್ರಕರಣ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಅಪಹಣಕಾರರಿಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ಆರಂಭಿಸಿದ್ದಾರೆ. 

ಅಧಿಕಾರಿಗಳು ಇದೀಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ವರ್ತೂರು ಪ್ರಕಾಶ್ ಅವರು ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಕೊಲೋರ ವಿಧಾನಸಭಾ ಕ್ಷೇತ್ರದ 2008-2018ರಲ್ಲಿ ನಡೆದ ಚುನಾವಣೆಗಳಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಮ್ಮ ಕಾಂಗ್ರೆಸ್ ಪಕ್ಷದ ನಾಯಕರೂ ಕೂಡ ಆಗಿದ್ದಾರೆ. ಡಿವಿ ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com