ಲಾಕ್ ಡೌನ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಮೆಮು ರೈಲು ಆರಂಭ

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದು ಲಾಕ್ ಡೌನ್ ನಂತರ ಸುಮಾರು ಎಂಟು ತಿಂಗಳ ನಂತರ ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆ ಸೋಮವಾರದಿಂದ ಕರ್ನಾಟದಲ್ಲಿ ಕಾಯ್ದಿರಿಸದ ಜೋಡಿ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದು ಲಾಕ್ ಡೌನ್ ನಂತರ ಸುಮಾರು ಎಂಟು ತಿಂಗಳ ನಂತರ ದೇಶದಲ್ಲಿ ಮೊದಲ ಬಾರಿಗೆ ಭಾರತೀಯ ರೈಲ್ವೆ ಸೋಮವಾರದಿಂದ ಕರ್ನಾಟದಲ್ಲಿ ಕಾಯ್ದಿರಿಸದ ಜೋಡಿ ಪ್ಯಾಸೆಂಜರ್ ರೈಲುಗಳನ್ನು ಆರಂಭಿಸಿದೆ.

ಲಾಕ್ ಡೌನ್ ಪರಿಣಾಮ ಮಾರ್ಚ್ 22 ರಿಂದ ಯಾವುದೇ ಸಾಮಾನ್ಯ ಪ್ರಯಾಣಿಕ ರೈಲು ಕಾರ್ಯನಿರ್ವಹಿಸಿರಲಿಲ್ಲ. ಇಂದು ಬೆಳಗ್ಗೆ 5.50ಕ್ಕೆ ಮೈಸೂರಿನಿಂದ ಹೊರಟ ಮೈಸೂರು-ಬಂಗಾರ್‌ಪೆಟ್ ಮೆಮು(ರೈಲು ಸಂಖ್ಯೆ 06558) ರೈಲು ಲಾಕ್ ಡೌನ್ ನಂತರ ಸಂಚಾರ ಆರಂಭಿಸಿದ ಮೊದಲ ಪ್ಯಾಸೆಂಜರ್ ರೈಲು.

ಅದರ ನಂತರ ಮಾರಿಕಪ್ಪಂ-ಬೆಂಗಳೂರು ಮೆಮು (ರೈಲು ಸಂಖ್ಯೆ 06556) ಬೆಳಗ್ಗೆ 6.34ಕ್ಕೆ ಮಾರಿಕಪ್ಪಂನಿಂದ ಸುಮಾರು 500 ಪ್ರಯಾಣಿಕರೊಂದಿಗೆ ಹೊರಟಿತು.

ಈ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು ರೈಲಿನಲ್ಲಿ ಕೋವಿಡ್-19 ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com