ಕೊಡಗು ನಾಡಿನಲ್ಲಿ ಈಗ ತೆಂಗಿನಕಾಯಿ ಶೂಟಿಂಗ್ ಜನಪ್ರಿಯ!

ಪುರಾತನ ಸಂಪ್ರದಾಯ, ಆಚರಣೆಯ ಹೊರತಾಗಿಯೂ, ರೈಫಲ್ ಗಳನ್ನು ಇದೀಗ ತೆಂಗಿನಕಾಯಿ ಶೂಟಿಂಗ್ ಗಾಗಿ ಬಳಸಲಾಗುತ್ತಿದೆ. ಇದು ಜಿಲ್ಲೆಯ ನಿವಾಸಿಗಳ ಪ್ರಸಿದ್ಧಿ ಕ್ರೀಡೆಯಾಗಿ ಮಾರ್ಪಟ್ಟಿದೆ.
ಶೂಟಿಂಗ್  ತರಬೇತಿಯಲ್ಲಿ  ಯುವ ಜನತೆ
ಶೂಟಿಂಗ್ ತರಬೇತಿಯಲ್ಲಿ ಯುವ ಜನತೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರೈಫಲ್ ಹಿಡಿದು ರಸ್ತೆಯ ಮೂಲಕ ನಡೆದು ಹೋಗುವವರನ್ನು ಗುರುತಿಸುವುದು ಸಾಮಾನ್ಯ ಸಂಗತಿಯಲ್ಲ.  ಗನ್ ಗಳು ಸಂಸ್ಕೃತಿಯ ಒಂದು ಭಾಗವಾಗಿದ್ದು, ಜಮ್ಮಾ ಹೊಂದಿರುವವರು ಮತ್ತು ಕೊಡವ ಸಮುದಾಯದವರು ಶಸಾಸ್ತ್ರ ಕಾಯ್ದೆಯಿಂದ ವಿನಾಯಿತಿ ಪಡೆದುಕೊಂಡಿದ್ದು,, ಜಿಲ್ಲೆಯ ಅನೇಕ ಧಾರ್ಮಿಕ ಆಚರಣೆಗಳ ಭಾಗವಾಗಿ ಗುಂಡುಗಳನ್ನು ಗಾಳಿಯಲ್ಲಿ ಹಾರಿಸಲಾಗುತ್ತದೆ.

ಪುರಾತನ ಸಂಪ್ರದಾಯ, ಆಚರಣೆಯ ಹೊರತಾಗಿಯೂ, ರೈಫಲ್ ಗಳನ್ನು ಇದೀಗ ತೆಂಗಿನಕಾಯಿ ಶೂಟಿಂಗ್ ಗಾಗಿ ಬಳಸಲಾಗುತ್ತಿದೆ. ಇದು ಜಿಲ್ಲೆಯ ನಿವಾಸಿಗಳ ಪ್ರಸಿದ್ಧಿ ಕ್ರೀಡೆಯಾಗಿ ಮಾರ್ಪಟ್ಟಿದೆ. ಕೊಡವ ಉತ್ಸವ ವೇಳೆಯಲ್ಲಿ ಆಯೋಜಿಸಲಾಗುತ್ತಿದ್ದ  ತೆಂಗಿನಕಾಯಿ ಶೂಟಿಂಗ್ ಸ್ಪರ್ಧೆಯನ್ನು ಇದೀಗ ಆಗಾಗ್ಗೆ ವಿವಿಧ ಒಕ್ಕೂಟಗಳು ಆಯೋಜಿಸುತ್ತಿವೆ. ಇದಕ್ಕೆ ಯಾವುದೇ ಜಾತಿ ಅಥವಾ ಸಮುದಾಯದ ನಿರ್ಬಂಧ ಇರುವುದಿಲ್ಲ.  ಕೋವಿಡ್-19 ಲಾಕ್ ಡೌನ್ ಮುಕ್ತಾಯದ ನಂತರ ಈ ಸ್ಪರ್ಧೆ ಇತ್ತೀಚಿಗೆ ಹೆಚ್ಚಾಗುತ್ತಿದೆ.

ಲಾಕ್ ಡೌನ್ ನಂತರ ನಡೆಯುತ್ತಿರುವ ಮೊದಲ ಕ್ರೀಡಾ ಕಾರ್ಯಕ್ರಮವಾಗಿರುವ ನೆಲಾಜಿಯಲ್ಲಿ ತೆಂಗಿನಕಾಯಿ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲು ನೆಲಾಜಿ ಮಹಿಳಾ ಸಮಾಜ ಚಿಂತನೆ ನಡೆಸಿರುವುದಾಗಿ ಮಹಿಳಾ ಸಮಾಜ ಕಾರ್ಯದರ್ಶಿ ಅಪ್ಪುಮಾನಂದ ಡೈಸಿ ಸೋಮಣ್ಣ ತಿಳಿಸಿದ್ದಾರೆ. ಇದರಲ್ಲಿ ಮಹಿಳೆಯರು, ಪುರುಷರು ಮತ್ತು ಮಕ್ಕಳು ಸೇರಿದಂತೆ ಸುಮಾರು 158 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಯುವ ಜನಾಂಗದಲ್ಲಿ ಶೂಟಿಂಗ್ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಂಕ್ರಾಮಿಕ ಸಂದರ್ಭದಲ್ಲಿ ಶೂಟಿಂಗ್ ಸ್ಪರ್ಧೆ ಆಯೋಜನೆ ಉತ್ತಮ ಕ್ರೀಡಾ ಚಟುವಟಿಕೆಯಾಗಿದೆ ಎಂದು ಬಿ ಶೆಟ್ಟೆಗೆರಿಯಲ್ಲಿ ಸ್ಪರ್ಧೆ ಆಯೋಜಕರಲ್ಲಿ ಒಬ್ಬರಾದ ಅಪ್ಪಂಡರಂದ ದಿನು ಹೇಳಿದ್ದಾರೆ.

ಶೂಟಿಂಗ್ ನಮ್ಮ ಜೀವನದ ಭಾಗವಾಗಿದೆ. ತಾತ ದೇಶಕ್ಕಾಗಿ ಸೇವೆ ಮಾಡಿದ್ದು, ತಮ್ಮ ತಂದೆ ಶೂಟಿಂಗ್ ಬಗ್ಗೆ ಆಸಕ್ತಿ ಬೆಳೆಸಿದ್ದು, ಅವರಿಂದಲೇ ತರಬೇತಿ ಪಡೆಯುತ್ತಿರುವುದಾಗಿ, ಶೂಟಿಂಗ್ ಸ್ಪರ್ಧೆಯನ್ನು ಕಳೆದುಕೊಳ್ಳಲು ಇಷ್ಟಪಡದ ಯುವತಿ ನಿಲ್ಮಾ ಪೊನ್ನು ಮಾನವತಿರಾ ಹೇಳುತ್ತಾರೆ. ಇದೇ ರೀತಿಯಲ್ಲಿ ಅನೇಕ ರೀತಿಯ ಕ್ರೀಡಾಪಟುಗಳು ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com